×
Ad

ಸುಳ್ಳು ಕೇಸು ದಾಖಲಿಸುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ

Update: 2024-01-25 20:41 IST

ಕುಂದಾಪುರ: ಕುಂದಾಪುರ ಕೊಂಕಣಿ ಸಮಾಜದವರ ಶ್ರೀಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿ ಮತ್ತು ವಿದ್ಯಾರಂಗ ಮಿತ್ರ ಮಂಡಳಿಯ ಅಧ್ಯಕ್ಷ, ಪದಾಧಿಕಾರಿಗಳ ಮೇಲೆ ನಿರಂತರವಾಗಿ ಸುಳ್ಳು ಕೇಸು ದಾಖಲಿಸಿ ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಖಾರ್ವಿ ಸಮಾಜದಿಂದ ಗುರುವಾರ ಕುಂದಾಪುರ ಸಹಾಯಕ ಕಮಿಷನರ್ ಮೂಲಕ ಗೃಹಸಚಿವರಿಗೆ ಮನವಿ ಸಲ್ಲಿಸಲಾಯಿತು.

ಸುಸ್ಥಿತಿಯಲ್ಲಿ ಸಾಗುತ್ತಿರುವ ಸಮಾಜದ ವ್ಯವಸ್ಥೆಗಳನ್ನು ಬುಡ ಮೇಲು ಮಾಡಲು ಕೆಲವು ವ್ಯಕ್ತಿಗಳು, ನೀಡಿರುವ ಎಲ್ಲಾ ಪ್ರಕರಣಗಳು ಸುಳ್ಳಾಗಿದ್ದು ಇವರು ಮುಂದಕ್ಕೂ ಕೂಡ ಸಮಾಜದಲ್ಲಿ ಒಡಕು ತರುವಂತಹ ಕೃತ್ಯಗಳನ್ನು ನಡೆಸಬಲ್ಲವ ರಾಗಿರುವುದರಿಂದ ನಮ್ಮ ಸಮಾಜಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಮುಂದಿನ ದಿನಗಳಲ್ಲಿ ಇವರು ಸಮಾಜದ ಮುಖ್ಯಸ್ಥರ ಮೇಲೆ ಕೇಸು ದಾಖಲಿಸಲು ಬಂದಲ್ಲಿ ಪರಮಾರ್ಶೆ ಮಾಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕುಂದಾಪುರ ಶ್ರೀಮಹಾಕಾಳಿ ದೇವಸ್ಥಾನದಿಂದ ಮಿನಿ ವಿಧಾನಸೌಧದ ತನಕ ಮೆರವಣಿಗೆ ಮೂಲಕ ಸಾಗಿ ಬಂದರು. ದೇವಸ್ಥಾನ ಅಧ್ಯಕ್ಷ ಜಯಾನಂದ ಖಾರ್ವಿ, ಕಾರ್ಯದರ್ಶಿ ಕೇಶವ ಖಾರ್ವಿ, ವಿದ್ಯಾರಂಗ ಮಿತ್ರ ಮಂಡಳಿ ಅಧ್ಯಕ್ಷ ದಾಮೋದರ ಖಾರ್ವಿ, ಮೊಕ್ತೇಸರ ಶಂಕರ ನಾಯ್ಕ, ಪ್ರಮುಖರಾದ ಪ್ರಕಾಶ್ ಖಾರ್ವಿ, ಅರುಣ್ ಖಾರ್ವಿ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ರಾಘವೇಂದ್ರ ಖಾರ್ವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News