ಉಡುಪಿ: ಡಾ.ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ವಿಶ್ವ ಸ್ವಲೀನತೆ ಜಾಗೃತಿ ಮಾಸದ ಚಿತ್ರೋತ್ಸವ

Update: 2024-04-27 14:57 GMT

ಉಡುಪಿ, ಎ.27: ಕಮಲ್ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬಯಿ, ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಹಾಗೂ ಆಟಿಸಂ ಸೊಸೈಟಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ವಲೀನತೆ ಜಾಗೃತಿ ಮಾಸದ ಪ್ರಯುಕ್ತ ಮಕ್ಕಳಿಗಾಗಿ ಚಿತ್ರೋತ್ಸವ ಚಟುವಟಿಕೆ, ಪೋಷಕರಿಗಾಗಿ -ಸ್ವಲಿನತೆ, ಮಾತಿನ ತೊಂದರೆ, ಅತಿಚಟುವಟಿಕೆ, ಕಲಿಕಾ ತೊಂದರೆಗಳ ಕುರಿತು ಮಾಹಿತಿ ಕಾರ್ಯಕ್ರಮ ಆಸ್ಪತ್ರೆಯಲ್ಲಿ ಇಂದು ಉದ್ಘಾಟನೆಗೊಂಡಿತು.

ಅಲ್ಲದೇ ದೊಡ್ಡಣಗುಡ್ಡೆಯಲ್ಲಿರುವ ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯು 20 ವರ್ಷಗಳನ್ನು ಪೂರೈಸಿದ ಅಂಗವಾಗಿ ಡಾ.ಎ. ವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಮತ್ತು ರೇಡಿಯೋ ಮಣಿಪಾಲ್ ಜಂಟಿಯಾಗಿ ಆಯೋಜಿಸಿದ ಮನದ ಮಾತು -ವಿವಿಧ ಮಾನಸಿಕ ಆರೋಗ್ಯ ವಿಷಯಗಳ ಮಾಹಿತಿ ಸರಣಿ ಕಾರ್ಯಕ್ರಮದ ಉದ್ಘಾಟನೆಯು ಕಮಲ್ ಎ ಬಾಳಿಗ ಸಭಾಂಗಣದಲ್ಲಿ ನಡೆಯಿತು.

ಮಣಿಪಾಲ ಎಂಐಸಿಯ ಸಹಾಯಕ ಪ್ರಾಧ್ಯಾಪಕಿ ಹಾಗೂ ಎಂಐಸಿ ರೇಡಿಯೋ ಮಣಿಪಾಲ ಕಮ್ಯುನಿಟಿ ಸ್ಟೇಷನ್‌ನ ಸಂಯೋಜಕಿ ಡಾ. ರಶ್ಮಿ ಅಮ್ಮೆಂಬಳ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋ ವೈದ್ಯರುಗಳಾದ ಡಾ.ವಿರೂಪಾಕ್ಷ ದೇವರಮನೆ, ಡಾ. ದೀಪಕ್ ಮಲ್ಯ, ಡಾ. ಮಾನಸ್ ಇ.ಆರ್ ಹಾಗೂ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಮನೋವೈದ್ಯ ಹಾಗೂ ಡಾ ಎ ವಿ ಬಾಳಿಗ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ ವಹಿಸಿದ್ದರು.

ಡಾ.ವಿರೂಪಾಕ್ಷ ದೇವರಮನೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರೆ ಸ್ಪೀಚ್ ಥೆರಪಿಸ್ಟ್ ರೂತ್ ಶೈನಿ ವಂದಿಸಿದರು. ವೃತ್ತಿಪರ ಚಿಕಿತ್ಸಕರಾದ ಪೂರ್ಣಿಮಾ ಎಸ್, ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಮಕ್ಕಳಿಗೆ ಚಿತ್ರೋತ್ಸವ ಮತ್ತು ಪೋಷಕರಿಗಾಗಿ ಸ್ವಲಿನತೆ, ಕಲಿಕಾ ತೊಂದರೆ, ಅತಿಚಟುವಟಿಕೆ ಹಾಗೂ ಮಾತಿನ ತೊಂದರೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಡಾ.ಪ್ರಿಯದರ್ಶಿನಿ, ದೀಪಶ್ರೀ, ಪೂರ್ಣಿಮ ಎಸ್, ರೂತ್ ಶೈನಿ ಹಾಗೂ ಶ್ವೇತಾ ನಾಯಕ ಇವರಿಂದ ಮಾಹಿತಿ ಕಾರ್ಯಗಾರ ನಡೆಯಿತು.

ಮಕ್ಕಳಿಗಾಗಿ ವಿವಿಧ ಮನರಂಜನಾ ಹಾಗೂ ಆಟೋಟ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.  ಈ ಕಾರ್ಯಕ್ರಮದ ಪ್ರಯೋಜನವನ್ನು 85ಕ್ಕಿಂತಲೂ ಹೆಚ್ಚು ಮಂದಿ ಮಕ್ಕಳು ಹಾಗೂ ಹೆತ್ತವರು ಪಡೆದುಕೊಂಡರು.






Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News