ಹೊಟೇಲ್ ಉದ್ಯಮದಲ್ಲಿ ನಷ್ಟ: ಉದ್ಯಮಿ ಆತ್ಮಹತ್ಯೆ
Update: 2024-05-25 21:16 IST
ಅಮಾಸೆಬೈಲು, ಮೇ 25: ಹೊಟೇಲ್ ಉದ್ಯಮದಲ್ಲಿ ನಷ್ಟದ ಹಿನ್ನೆಲೆಯಲ್ಲಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 24ರಂದು ಬೆಳಿಗ್ಗೆ ನಡೆದಿದೆ.
ಮೃತರನ್ನು ಶೇಡಿಮನೆ ಗ್ರಾಮದ ಸುರೇಂದ್ರ(48) ಎಂದು ಗುರುತಿಸಲಾಗಿದೆ. ಕರೋನಾ ಖಾಯಿಲೆ ಬಳಿಕ ಹೋಟೆಲ್ ವ್ಯವಹಾರದಲ್ಲಿ ನಷ್ಟ ಉಂಟಾಗಿ ಊರಿಗೆ ಬಂದಿದ್ದು, ಪ್ರಸ್ತುತ ಕೊಲ್ಲಾಪುರದಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡಿ ಕೊಂಡಿದ್ದರು. ಹೋಟೆಲ್ ಉದ್ಯಮದಲ್ಲಿ ನಷ್ಟ ಉಂಟಾದ ನಂತರ ಕುಡಿತದ ಚಟ ಬಿದ್ದ ಇವರು, ಕಣ್ಣಿನ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಮೂರು ದಿನಗಳ ಹಿಂದೆ ಮನೆಗೆ ಬಂದ ಇವರು, ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.