ಆರು ವರ್ಷಗಳಿಂದ ವ್ಯಕ್ತಿ ನಾಪತ್ತೆ
Update: 2024-06-26 21:52 IST
ಕೊಲ್ಲೂರು, ಜೂ.26: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಕೊಲ್ಲೂರು ಹೆಗ್ಡೆಮಠದ ವಿಶ್ವೇಶ್ವರ ಎಂಬವರ ಮಗ ಮೋಹನ್(52) ಎಂಬವರು 2019ರ ಎ.1ರಂದು ಮನೆಯಿಂದ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ಬಾರದೆ ನಾಪತ್ತೆಯಾಗಿದ್ದಾರೆ.
5.5 ಅಡಿ ಎತ್ತರ, ದುಂಡು ಮುಖ, ಗೋದಿ ಮೈ ಬಣ್ಣ ಸಾದಾರಣ ಶರೀರ ಕಪ್ಪು-ಬಿಳಿ ಮಿಶ್ರಿತ ತಲೆ ಕೂದಲು ಹೊಂದಿರುವ ಇವರು, ಪಂಚೆ ಹಾಗೂ ಟಿಶರ್ಟ್ ಧರಿಸಿ ಹೋಗಿದ್ದರು. 7ನೇ ತರಗತಿ ವಿದ್ಯಾಬ್ಯಾಸ ಮಾಡಿದ್ದು, ಕನ್ನಡ, ಮಲಯಾಳಂ, ತಮಿಳು ಭಾಷೆ ಮಾತನಾಡುತ್ತಾರೆ. ಎದೆಯ ಎಡಭಾಗದಲ್ಲಿ ಕಪ್ಪುಮಚ್ಚೆ ಇರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.