×
Ad

ಉಡುಪಿ ಜಿಲ್ಲೆ ಸದ್ಯಕ್ಕೆ ಕಾಲರಾ ಮುಕ್ತ: ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ

Update: 2024-09-25 21:33 IST

ಉಡುಪಿ, ಸೆ.25: ಉಡುಪಿ ಜಿಲ್ಲೆಯಲ್ಲಿ ಸದ್ಯ ಕಾಲರಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ.ಜಿಲ್ಲೆಯಲ್ಲಿದ್ದ ಎಲ್ಲಾ 23 ಮಂದಿ ಕಾಲರಾ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದು, ಹೊಸದಾಗಿ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ತಿಳಿಸಿದ್ದಾರೆ.

ಸೋಮವಾರ ಬಂದ ಆರು ಸ್ಯಾಂಪಲ್‌ಗಳ ವರದಿ ನೆಗೆಟಿವ್ ಆಗಿ ಬಂದಿದ್ದರೆ, ವಾಂತಿಬೇಧಿಯಿಂದ ನರಳುತಿದ್ದು, ನಿನ್ನೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಪಾಂಡಿಚೇರಿ ಮೂಲದ ಮಲ್ಪೆ ಬಂದರಿನಲ್ಲಿ ಮೀನು ಕಾರ್ಮಿಕರಾಗಿ ದುಡಿಯುತಿದ್ದ ಆರು ಮಂದಿಯ ವರದಿಯೂ ಇಂದು ಕಾಲರಾಕ್ಕೆ ನೆಗೆಟಿವ್ ಬಂದಿದ್ದು, ಅವರೀಗ ಸಂಪೂರ್ಣ ಗುಣಮುಖ ರಾಗಿದ್ದಾರೆ ಎಂದು ಡಾ.ನಾಗರತ್ನ ತಿಳಿಸಿದರು.

ಹೀಗಾಗಿ ಇಂದು ಸಂಜೆಯವರೆಗೆ ಕಾಲರಾ ಸೋಂಕಿತರಾಗಲೀ, ಕಾಲರಾ ಶಂಕಿತರಾಗಲಿ ಜಿಲ್ಲೆಯಲ್ಲಿ ಇರುವುದಿಲ್ಲ. ಆದರೆ ಜಿಲ್ಲೆ ಕಾಲರಾ ಮುಕ್ತವಾಗಿದೆ ಎಂದು ಈಗಲೇ ಹೇಳುವಂತಿಲ್ಲ ಎಂದೂ ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News