×
Ad

ಪದ್ಯಾಣ ಗೋವಿಂದ ಭಟ್-ಗೋವಿಂದ ನಾಯ್ಕಗೆ ಸರ್ಪಂಗಳ ಸ್ಮಾರಕ ಪ್ರಶಸ್ತಿ ಪ್ರದಾನ

Update: 2024-10-27 20:14 IST

ಉಡುಪಿ, ಅ.27: ಜೀವ ವಿಮಾ ಅಧಿಕಾರಿಗಳಾಗಿ ನಿವೃತ್ತರಾಗಿದ್ದ, ಕಲಾಪ್ರೇಮಿ ಸರ್ಪಂಗಳ ಸುಬ್ರಮಣ್ಯ ಭಟ್ ಸ್ಮರಣೆಯಲ್ಲಿ ಪ್ರತೀ ವರ್ಷ ನಡೆಸುವ ಸರ್ಪಂಗಳ ಯಕ್ಷೋತ್ಸವ ರವಿವಾರ ಉಡುಪಿ ಯಕ್ಷಗಾನ ಕಲಾರಂಗದ ಐ.ವೈ.ಸಿ.ಸಭಾಂಗಣದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಕಟೀಲು ಮೇಳದ ಹಿರಿಯ ಭಾಗವತರಾದ ಪದ್ಯಾಣ ಗೋವಿಂದ ಭಟ್ ಅವರನ್ನು ಸರ್ಪಂಗಳ ಸುಬ್ರಮಣ್ಯ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚೌಕಿ ಸಹಾಯಕರಾಗಿ ಐದು ದಶಕ ಸೇವೆ ಸಲ್ಲಿಸಿದ ಕಾಟುಕುಕ್ಕೆ ಗೋವಿಂದ ನಾಯ್ಕ ಅವರಿಗೆ ಸರ್ಪಂಗಳ ಕಲಾ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಪ್ರಶಸ್ತಿ ಪುರಸ್ಕೃತ ರನ್ನು ಸನ್ಮಾನಿಸಿದರು. ಕಾರ್ಯಕ್ರಮದ ಪ್ರಾಯೋಕರಾದ ಡಾ.ನರೇಂದ್ರ ಶೆಣೈ, ಮತ್ತು ಡಾ.ಶೈಲಜಾ ಭಟ್ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಕಾರ್ಯ ದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News