×
Ad

ಉಡುಪಿ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆ

Update: 2024-12-05 20:27 IST

ಉಡುಪಿ, ಡಿ.5: ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಇಂದು ಸಂಜೆ ವೇಳೆ ಗುಡುಗು ಮಿಂಚು ಸಹಿತ ಅಕಾಲಿಕ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಉಡುಪಿ ನಗರ, ಕಾರ್ಕಳ, ಕಾಪು, ಪಡುಬಿದ್ರೆ ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದು, ಕೆಲವೆಡೆ ಭಾರೀ ಗುಡುಗು ಸಿಡಿಲು ಕಂಡು ಬಂತು. ಈ ಅಕಾಲಿಕ ಮಳೆಯಿಂದಾಗಿ ಹಲವು ಕಡೆ ನಿಗದಿಯಾಗಿದ್ದ ಕಾರ್ಯ ಕ್ರಮಗಳಿಗೆ ಅಡ್ಡಿಯಾಯಿತು.

ಇಂದ್ರಾಳಿ ಶಾಲೆಯೊಂದರ ವಾರ್ಷಿಕೋತ್ಸವ ನಡೆಯುತ್ತಿರುವಾಗ ಮಳೆ ಯಾದ ಪರಿಣಾಮ ಸಾರ್ವಜನಿಕರು ಕೊಡೆ ಹಿಡಿದುಕೊಂಡೇ ಕಾರ್ಯಕ್ರಮ ವೀಕ್ಷಿಸಬೇಕಾಯಿತು. ಅದೇ ರೀತಿ ವಾಹನ ಸವಾರರು ಕೂಡ ತೊಂದರೆ ಅನುಭವಿಸುವಂತಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News