×
Ad

ಕುಂದಾಪುರ: ಮಹಿಳೆ ಆತ್ಮಹತ್ಯೆ

Update: 2025-01-16 16:54 IST

ಕುಂದಾಪುರ: ಹೊಸದಾಗಿ ಖರೀದಿಸಿದ ಜಮೀನು ನೋಂದಣಿ ಮಾಡಲು ಹೋಗಿ ಬಂದಿದ್ದ ಮಹಿಳೆ ಕೆಲವು ಹೊತ್ತಿನಲ್ಲೇ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕೂರು ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಬಳ್ಕೂರಿನ ನಿವಾಸಿ, ಸಮೀಪದ ಪಾನಕದಕಟ್ಟೆಯಲ್ಲಿ ಸೆಲೂನ್ ನಡೆಸುತ್ತಿದ್ದ ವಿನಯ್ ಭಂಡಾರಿ ಎಂಬುವರ ಪತ್ನಿ ಶ್ರುತಿ (39) ಎಂದು ಗುರುತಿಸಲಾಗಿದೆ.

ಶೃತಿ ಹಾಗೂ ವಿನಯ್ ಕುಟುಂಬ ಬಳ್ಕೂರಿನಲ್ಲಿ ಜಾಗ ಖರೀದಿ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಬುಧವಾರ ಜಾಗದ ನೋಂದಣಿಗೆ ಹೋಗಿ ಬಂದಿದ್ದರು. ಜಾಗದ ರಿಜಿಸ್ಟ್ರೇಶನ್ ಸಲುವಾಗಿ ಬಾಕಿ ಹಣವನ್ನು ಶ್ರುತಿ ಅವರ ಬ್ಯಾಂಕ್ ಖಾತೆಯ ಚೆಕ್ ಮೂಲಕ ಜಾಗದ ಮಾಲಕರಿಗೆ ನೀಡಲಾಗಿತ್ತು. ಆ ಹಣವನ್ನು ಮಾಲಕರು ವಿತ್ ಡ್ರಾ ಮಾಡಲು ಹೋದಾಗ ಖಾತೆಯಲ್ಲಿ‌ ಸ್ವಲ್ಪ ಹಣ ಕಮ್ಮಿಯಿತ್ತೆನ್ನಲಾಗಿದೆ. ಈ ಬಗ್ಗೆ ಬ್ಯಾಂಕ್ ನಲ್ಲಿ ವಿಚಾರಿಸಲು ಶ್ರುತಿ ಅವರು ತನ್ನ ಸ್ಕೂಟಿಯಲ್ಲಿ ತೆರಳಿದ್ದರು. ಇದಾದ ಬಳಿಕ ಬಹಳ ಸಮಯ ಪತಿಯ ಕರೆ ಸ್ವೀಕರಿಸಿರಲಿಲ್ಲ, ಮನೆಗೂ ವಾಪಾಸ್ಸಾಗಿರಲಿಲ್ಲ. ಕೆಲ ಹೊತ್ತಿನ ನಂತರ ಬಳ್ಕೂರು ಸಮೀಪದ ವಾರಾಹಿ ಹೊಳೆಯ ಬದಿಯಲ್ಲಿ ಶ್ರುತಿ‌ ಅವರ ಸ್ಕೂಟಿ ನಿಂತಿರುವುದು ತಿಳಿದಿದ್ದು ಘಟನೆ ತಿಳಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಶೋಧ ಕಾರ್ಯ ನಡೆಸಿದ್ದು ಬುಧವಾರ ಮಧ್ಯಾಹ್ನದ ಹೊತ್ತಿಗೆ ಮೃತ ದೇಹವನ್ನು ಮೇಲಕ್ಕೆತ್ತಲಾಯಿತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News