ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
Update: 2025-01-25 21:05 IST
ಮಲ್ಪೆ, ಜ.25: ಮೀನುಗಾರರೊಬ್ಬರು ಅಕಸ್ಮಿಕವಾಗಿ ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಜ.24ರಂದು ರಾತ್ರಿ ವೇಳೆ ಮಲ್ಪೆ ಬಂದರಿನಲ್ಲಿ ನಡೆದಿದೆ.
ಮೃತರನ್ನು ಗುಂಡ್ಮಿ ಗ್ರಾಮದ ಸಂಜಯ(40) ಎಂದು ಗುರುತಿಸಲಾಗಿದೆ. ಮಲ್ಪೆಯ ರಾಮದಾಸ ಉಪ್ಪೂರು ಎಂಬವರ ಮಾಲಕತ್ವದ ತುಂಗ ಮೀನು ಗಾರಿಕೆ ಟ್ರೋಲ್ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಇವರು, ಮಲ್ಪೆ ಬಂದರಿನ ಸೈಡ್ ದಕ್ಕೆಯಿಂದ ಮೀನುಗಾರಿಕೆ ಹೊರಟ ಬೋಟಿನಿಂದ ಆಕಸ್ಮಿಕವಾಗಿ ಆಯತಪ್ಪಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು. ಜ.25ರಂದು ಬೆಳಗ್ಗೆ ಅದೇ ಜಾಗದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.