×
Ad

ಕೃತಕ ಬುದ್ಧಿಮತ್ತೆ ಕುರಿತು ಆತಂಕ ಬೇಡ: ಪ್ರೊ.ಕೆ.ಪಿ.ರಾವ್

Update: 2025-02-08 20:40 IST

ಉಡುಪಿ, ಫೆ.8: ಕೃತಕ ಬುದ್ಧಿಮತ್ತೆ ಅಧ್ಯಯನ ಸಮಯ ಉಳಿಸಿ ಜ್ಞಾನ, ಅರಿವನ್ನು ಹೆಚ್ಚಿಸುವ ಮೂಲಕ ಕ್ರಿಯಾಶೀಲತೆ ಬದಲಾಯಿಸಲು ಪೂರಕ ವಾಗಲಿದೆ. ಅದರ ಕುರಿತು ಯಾವುದೇ ಆತಂಕ ಬೇಡ ಎಂದು ಹಿರಿಯ ಭಾಷಾ ವಿಜ್ಞಾನಿ ನಾಡೋಜ ಪ್ರೊ.ಕೆ.ಪಿ.ರಾವ್ ಹೇಳಿದ್ದಾರೆ.

ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಜ್ಞಾನಂ ಟ್ರಸ್ಟ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಟ್ರಸ್ಟ್‌ನ್ನು ಉದ್ಘಾಟಿಸಿದ ಲೇಖಕ ಡಾ.ಬಿ. ಭಾಸ್ಕರ ರಾವ್ ಮಾತನಾಡಿ, ಕೃತಕ ಬುದ್ಧಿಮತ್ತೆ ಕಲೆ ಮತ್ತು ಕಲಾವಿದರಿಗೆ ದೊಡ್ಡ ಸವಾಲು ಆಗಿದೆ. ಆ ಸವಾಲನ್ನು ಸ್ವೀಕರಿಸಿ ಕಲಾವಿದರು ಹಾಗೂ ಕಲಾ ಸಂಸ್ಥೆಗಳು ಬೆಳೆಯಬೇಕ ಎಂದು ತಿಳಿಸಿದರು.

ಸಾಹಿತಿ ಸುಧಾ ಆಡುಕಳ ಮಾತನಾಡಿ, ನಟನೆಯು ಭಾಷೆಗಳನ್ನು ಆಪ್ತ ವಾಗಿಸುತ್ತದೆ. ಪ್ರೌಢ ಶಿಕ್ಷಣದಲ್ಲಿ ಮೇಲುಗೈ ಸಾಧಿಸುವ ಬಾಲಕಿಯರ ಸಂಖ್ಯೆ ಉನ್ನತ ಶಿಕ್ಷಣದಲ್ಲಿ ಇಳಿಮುಖವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಕಲೆ ಸಂಸ್ಕೃತಿಯಲ್ಲಿ ತೊಡಗಿಸಿಕೊಳ್ಳುವ ಹೆಣ್ಣು ಮಕ್ಕಳು, ಮದುವೆಯ ಬಳಿಕ ಅದರಿಂದ ದೂರವಾಗುತ್ತಿದ್ದಾರೆ. ಈ ಬಗ್ಗೆ ಕಲಾವಿದರು ಆಲೋಚನೆ ಮಾಡ ಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ಲಾಂಛನವನ್ನು ಅನಾವರಣಗೊಳಿಸಲಾಯಿತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿದರು. ನಾಟಕ ನಿರ್ದೇಶಕ ಗಣೇಶ್ ರಾವ್ ಎಲ್ಲೂರು ಅವರನ್ನು ಸನ್ಮಾನಿಸ ಲಾಯಿತು.

ಜಿ.ಪಿ.ಪ್ರಭಾಕರ ತುಮರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಷಾ ಪೆರ್ಡೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದುಷಿ ಸಂಸ್ಕೃತಿ ಪ್ರಭಾಕರ್ ಅವರಿಂದ ಹೆಜ್ಜೆಗೊಲಿದ ಬೆಳಕು(ನಾಟ್ಯ ರಾಣಿ ಶಾಂತಲೆಯ ಆತ್ಮ ವೃತ್ತ) ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News