ವಾರಾಹಿ ಯೋಜನೆ: ಕಾಲುವೆಗೆ ಹರಿಸಿರುವ ನೀರು ತಾತ್ಕಾಲಿಕ ಸ್ಥಗಿತ
Update: 2025-03-21 21:08 IST
ಉಡುಪಿ, ಮಾ.21: ವಾರಾಹಿ ನೀರಾವರಿ ಯೋಜನೆಯಡಿಯಲ್ಲಿ ಬರುವ ಕಾಲುವೆ ಪ್ರದೇಶದಲ್ಲಿ ತುರ್ತು ದುರಸ್ಥಿ ಹಾಗೂ ನಿರ್ವಹಣೆ ಕಾಮಗಾರಿ ಗಳನ್ನು ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಬೇಸಿಗೆ ಹಂಗಾಮಿಗೆ ಸಂಬಂಧಿಸಿದಂತೆ ಕಾಲುವೆಯಲ್ಲಿ ಹರಿಸಿರುವ ನೀರನ್ನು ಮಾರ್ಚ್ 23ರಿಂದ 30ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು.
ಈ ಪ್ರದಶದ ರೈತಾಪಿ ಬಾಂಧವರು ಇಲಾಖೆಯೊಂದಿಗೆ ಸಹಕರಿಸುವಂತೆ ಸಿದ್ಧಾಪುರ ವಾರಾಹಿ ಜಲಾಶಯ ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆ ಯಲ್ಲಿ ಮನವಿ ಮಾಡಿದ್ದಾರೆ.