ಹಿರಿಯಡ್ಕ: ದುಷ್ಕರ್ಮಿಗಳಿಂದ ಮನೆಯ ಕಿಟಕಿ ಗಾಜಿಗೆ ಹಾನಿ
Update: 2025-05-02 20:41 IST
ಹಿರಿಯಡ್ಕ, ಮೇ 2: ದುಷ್ಕರ್ಮಿಗಳು ಮನೆಯೊಂದರ ಕಿಟಕಿ ಗಾಜಿಗೆ ಬಾಟಲಿ ಎಸೆದು ಹಾನಿಗೊಳಿಸಿರುವ ಘಟನೆ ಮೇ 1ರಂದು ಮಧ್ಯರಾತ್ರಿ ವೇಳೆ ಪೆರ್ಡೂರು ಎಂಬಲ್ಲಿ ನಡೆದಿದೆ.
ಪೆರ್ಡೂರು ನಿವಾಸಿ ಮುಸ್ತಾಫ್(43) ಎಂಬವರ ಮನೆಯ ಎದುರು ಇಬ್ಬರು ಬೈಕಿನಲ್ಲಿ ಬಂದಿದ್ದು, ಕೈಯಲ್ಲಿ ಖಾಲಿ ಬಾಟಲಿಗಳನ್ನು ಹಿಡಿದು ಕೊಂಡು ಮನೆಯ ಅಂಗಳಕ್ಕೆ ಬಂದು ಬಟಲಿಗಳನ್ನು ಬಿಸಾಡುತ್ತಾ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.