×
Ad

ರೊಟರ್ಯಾಕ್ಟ್ ಕ್ಲಬ್‌ನಿಂದ ವಿವಿಧ ಸೇವಾ ಕಾರ್ಯಕ್ರಮ

Update: 2025-05-10 17:44 IST

ಉಡುಪಿ, ಮೇ 10: ರೊಟರ್ಯಾಕ್ಟ್ ಕ್ಲಬ್ ಉಡುಪಿ ವತಿಯಿಂದ ವಾರ್ಷಿಕ ಜಿಲ್ಲಾ ರೊಟರಾಕ್ಟ್ ಪ್ರತಿನಿಧಿಯ ಅಧಿಕೃತ ಭೇಟಿಯ ಪ್ರಯುಕ್ತ ಕುಕ್ಕಿಕ್ಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಬಾಲನಿಕೇತನದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪುಸ್ತಕಗಳು, ಛತ್ರಿಗಳು ಹಾಗೂ ಇತರ ಕಚೇರೀ ವಸ್ತುಗಳನ್ನು ವಿತರಿಸಲಾಯಿತು. ಜೊತೆಗೆ, ಹತ್ತನೇ ತರಗತಿ ವ್ಯಾಸಂಗ ಮುಗಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಐದು ವಿದ್ಯಾರ್ಥಿಗಳಿಗೆ ಸಹಾಯಧನ ನೀಡಿ ಗೌರವಿಸಲಾಯಿತು.

ಜಿಲ್ಲಾ ರೊಟರಾಕ್ಟ್ ಪ್ರತಿನಿಧಿ ಚೇತನ್ ಕುಮಾರ್, ಜಿಲ್ಲಾ ರೊಟರಾಕ್ಟ್ ಸಭಾಪತಿ ನವೀನ್ ಅಮೀನ್, ರೋಟರಿ ಉಡುಪಿ ಅಧ್ಯಕ್ಷ ಗುರುರಾಜ್ ಭಟ್, ರೋಟರಿ ಉಡುಪಿಯ ರೊಟರಾಕ್ಟ್ ಸಭಾಪತಿ ಬಿ.ಕೆ.ನಾರಾಯಣ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ರೊಟರಾಕ್ಟ್ ಕ್ಲಬ್ ಉಡುಪಿಯ ಅಧ್ಯಕ್ಷ ಅಂಶ್ ಕೋಟ್ಯಾನ್ ವಹಿಸಿದ್ದರು.

ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಅಂತಾರಾಷ್ಟ್ರೀಯ ರೊಟರಾಕ್ಟ್ ಅಸೆಂಬ್ಲಿಯಲ್ಲಿ ಭಾಗವಹಿಸಿದ ಮಹಾಲಸ ಕಿಣಿ ಮತ್ತು ಪ್ರಸ್ತುತ ಜಿಲ್ಲಾ ಪ್ರತಿನಿಧಿಯಾಗಿ ಶ್ರೇಷ್ಠ ಕಾರ್ಯನಿರ್ವಹಣೆ ಮಾಡುತ್ತಿರುವ ಚೇತನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕ್ಲಬ್‌ನ ಸೇವಾ ಚಟುವಟಿಕೆಗಳ ವರದಿಯನ್ನು ಕಾರ್ಯದರ್ಶಿ ಅನಂತ ಕೃಷ್ಣ ವಾಚಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News