×
Ad

ಕೊಡವೂರು ದೇವಸ್ಥಾನದಲ್ಲಿ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ

Update: 2025-05-11 21:09 IST

ಉಡುಪಿ: ಅಪರೇಷನ್ ಸಿಂಧೂರದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರದ ಸುತ್ತೋಲೆಯಂತೆ ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನ ದಲ್ಲಿ ನರಸಿಂಹ ದೇವರ ಸಾಮೂಹಿಕ ಮಂತ್ರ ಪಠಣ ವಿಶೇಷ ಪೂಜೆ ಯೊಂದಿಗೆ ದೇಶ ರಕ್ಷಣೆಗಾಗಿ ಭಾರತೀಯ ಸೇನೆಗೆ ವಿಶೇಷ ಶಕ್ತಿ ದೊರಕಲಿ, ಶತ್ರುಗಳ ಕಾಟ, ಅಶಾಂತಿ ತೊಲಗಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಬೆಳ್ಕಳೆ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಭಕ್ತವೃಂದದ ಅಧ್ಯಕ್ಷ ದಿವಾಕರ್ ಶೆಟ್ಟಿ ತೋಟದ ಮನೆ, ಉದ್ಯಮಿ ಆನಂದ ಪಿ.ಸುವರ್ಣ, ರಾಮ ಶೇರಿಗಾರ ಚಂದ್ರಶೇಖರ್ ಕೊಡವೂರು ಉಪಸ್ಥಿತರಿದ್ದರು. ದೇವಳದ ತಂತ್ರಿ ವಾದಿರಾಜ ತಂತ್ರಿ ಮತ್ತು ದೇವಳದ ಅರ್ಚಕ ವೃಂದದವರು ವಿಶೇಷ ಪೂಜೆ, ಪ್ರಾರ್ಥನೆಯನ್ನು ನೆರವೇರಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News