×
Ad

‘ಸಮಾಲೋಚನ’ ರಾಷ್ಟ್ರೀಯ ಮಟ್ಟದ ಏಕದಿನ ಕಾರ್ಯಾಗಾರ

Update: 2025-05-12 18:13 IST

ಉಡುಪಿ, ಮೇ 12: ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಮನೋ ವಿಜ್ಞಾನ ಮತ್ತು ಮಾನಸ ರೋಗ ವಿಭಾಗದ ವತಿಯಿಂದ ‘ಸಮಾಲೋಚನ-2025’ ಹೆಸರಿನಲ್ಲಿ ರಾಷ್ಟ್ರೀಯ ಮಟ್ಟದ ಏಕದಿನ ಕಾರ್ಯಾ ಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಪ್ರಾಂಶುಪಾಲ ಡಾ.ಮಮತಾ ಕೆ.ವಿ. ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೋಗಿಗಳ ಮತ್ತು ಅವರ ಪರಿಚಾರಕರ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವುದು ಬಹುದೊಡ್ಡ ಸವಾಲಾಗಿದೆ ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ.ಪೌಲೋಮಿ ಎಂ.ಸುಧೀರ್ ಮತ್ತು ಡಾ. ಪ್ರಸನ್ನ ಹೆಗಡೆ ಕಾರ್ಯಾಗಾರದ ವಿಷಯಗಳಾದ ಸಾಂವೇದನಾತ್ಮಕ ವರ್ತನೆ ಚಿಕಿತ್ಸೆ(ಸಿಬಿಟಿ) ಹಾಗೂ ವ್ಯವಹಾರಾತ್ಮಕ ವಿಶ್ಲೇಷಣೆ(ಟಿಎ) ಬಗ್ಗೆ ವಿಶ್ಲೇಷಣೆ ನಡೆಸಿ ಮಾನವನ ವರ್ತನೆ ಮತ್ತು ವ್ಯವಹಾರದ ನಕಾರಾತ್ಮಕ ಹಿನ್ನಲೆ ಹಾಗು ಪರಿಹಾರದ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ನೀಡಿದರು.

ಡಾ.ನಾಗರಾಜ ಎಸ್., ಡಾ.ವೀರಕುಮಾರ ಕೆ., ಡಾ.ಶ್ರೀಲತಾ ಕಾಮತ್, ಡಾ.ಅಶೋಕ್ ಕುಮಾರ್ ಬಿ.ಎನ್., ಡಾ.ಕೆ.ಆರ್.ರಾಮಚಂದ್ರ, ಡಾ. ಶ್ರೀಕಾಂತ್, ಡಾ.ರವಿಪ್ರಸಾದ್ ಹೆಗ್ದೆ, ಡಾ.ಚೈತ್ರಾ ಹಾಜರಿ ದ್ದರು. ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ.ವಿಜಯೇಂದ್ರ ಜಿ.ಭಟ್ ಕಾರ್ಯಾ ಗಾರದ ವಿಷಯ ವಸ್ತು ಪರಿಚಯವನ್ನು ಮಾಡಿದರು.

ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದ ವರದಿಯನ್ನು ಡಾ. ಧನೇಶ್ವರಿ ಎಚ್.ಎ ವಾಚಿಸಿದರು. ಡಾ.ಪುನೀತ್ ಪಿ. ವಂದಿಸಿದರು. ಕಾರ್ಯ ಕ್ರಮದಲ್ಲಿ ಕರ್ನಾಟಕದ ವಿವಿಧ ಆಯುರ್ವೇದ ಮಹಾವಿದ್ಯಾಲ ಯಗಳು ಸೇರಿದಂತೆ ಇತರ ರಾಜ್ಯ ಗಳಿಂದಲೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿದಂತೆ ಒಟ್ಟು 122 ಪ್ರತಿನಿಧಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News