×
Ad

ರೋಬೋಟಿಕ್ ಟೀಚರ್ಸ್ ಅಭಿವೃದ್ಧಿ: ಇಸಿಆರ್ ವಿದ್ಯಾರ್ಥಿಗಳ ಸಾಧನೆ

Update: 2025-05-13 19:19 IST

ಬ್ರಹ್ಮಾವರ, ಮೇ 13: ಅಚ್ಲಾಡಿ ಗ್ರಾಮದ ಮಧುವನದಲ್ಲಿರುವ ಇಸಿಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಆಧಾರಿತ ಎಐ ರೋಬೋಟಿಕ್ ಟೀಚರ್ಸ್ ಅಭಿವೃದ್ದಿ ಪಡಿಸಲಾಗಿದೆ.

ಕಾಲೇಜಿನ ಎಲ್ಲಾ ತರಗತಿಗಳಲ್ಲೂ ಎಐ ರೋಬೋಟಿಕ್ ಟೀಚರ್ಸ್‌ನ್ನು ಸೋಮವಾರ ಅನಾವರಣ ಗೊಳಿಸುವ ಮೂಲಕ ಈ ರೀತಿಯ ತಂತ್ರಜ್ಞಾನ ಪರಿಚಯಿಸಿದ ರಾಜ್ಯದ ಮೊತ್ತ ಮೊದಲ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಗೆ ಈ ಇಸಿಆರ್ ಪಾತ್ರವಾಗಿದೆ. ನೂತನವಾಗಿ ಪರಿಚಯಿಸಲಾದ ಎಐ ರೋಬೋ ಟಿಕ್ ಟೀಚರಸ್‌ನೊಂದಿಗೆ ಸಂಸ್ಥೆಯ ವಿದ್ಯಾರ್ಥಿಗಳು ಸಂವಾದ ನಡೆಸಿದರು. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ರೋಬೋಟಿಕ್ ಟೀಚರ್ಸ್ ಸಮರ್ಪಕವಾದ ಉತ್ತರ ನೀಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಮಧು ಟಿ.ಭಾಸ್ಕರನ್, ಇಸಿಆರ್ ಸಂಸ್ಥೆಯ ವಿದ್ಯಾರ್ಥಿ ಗಳೇ ಎಐ ರೋಬೋಟ್‌ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಪ್ರತಿ ತರಗತಿಯಲ್ಲೂ ಒಂದೊಂದು ರೋಬೋಟ್‌ಗಳನ್ನು ಬಳಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ತರಗತಿಯ ಯಾವುದೇ ವಿಷಯದ ಯಾವುದೇ ಸಂಶಯವನ್ನು ಖುದ್ಧಾಗಿ ರೋಬೋಟ್ ಮೂಲಕ ಬಗೆಹರಿಸಿ ಕೊಳ್ಳಬಹುದು. ತರಗತಿಯಲ್ಲಿ ಶಿಕ್ಷಕರು ಕೂಡ ಇರುತ್ತಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News