ವಿದ್ಯುತ್ ತಂತಿ ಮೈಮೇಲೆ ಬಿದ್ದು ಯಕ್ಷಗಾನ ಕಲಾವಿದ ಮೃತ್ಯು
Update: 2025-05-14 21:09 IST
ರಂಜಿತ್ ಬನ್ನಾಡಿ
ಉಡುಪಿ, ಮೇ 14: ವಿದ್ಯುತ್ ತಂತಿ ಮೈಮೇಲೆ ಬಿದ್ದ ಪರಿಣಾಮ ಬೈಕಿನಲ್ಲಿ ಹೋಗುತ್ತಿದ್ದ ಸವಾರ ಮೃತಪಟ್ಟ ಘಟನೆ ಮೇ 13ರಂದು ರಾತ್ರಿ ಆಗುಂಬೆ ಸಮೀಪ ನಡೆದಿದೆ.
ಮೃತರನ್ನು ಯುವ ಯಕ್ಷಗಾನ ಕಲಾವಿದ ರಂಜಿತ್ ಬನ್ನಾಡಿ ಎಂದು ಗುರುತಿಸಲಾಗಿದೆ. ಕೊಪ್ಪ ಸಮೀಪ ದಲ್ಲಿದ್ದ ಸೂರಾಲು ಮೇಳದ ಪ್ರದರ್ಶನ ಮಳೆಯಿಂದ ರದ್ಧಾದ ಕಾರಣ ರಂಜಿತ್ ತನ್ನ ಬೈಕಿನಲ್ಲಿ ಮನೆಗೆ ಹೊರಟಿದ್ದರು. ದಾರಿ ಮಧ್ಯೆ ಭಾರೀ ಗಾಳಿಮಳೆಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ಬೈಕಿನಲ್ಲಿ ಹೋಗುತ್ತಿದ್ದ ರಂಜಿತ್ ಮೈಮೇಲೆ ಬಿತ್ತೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಅಸ್ವಸ್ಥಗೊಂಡ ಅವರು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಹಿಂಬದಿ ಸವಾರ ಸ್ತ್ರೀ ಪಾತ್ರಧಾರಿ ವಿನೋದ್ ರಾಜ್ ಅಪಾಯದಿಂದ ಪಾರಾಗಿದ್ದಾರೆ.