ಬೈಕ್ ಅಪಘಾತ: ಗಾಯಾಳು ಸವಾರ ಮೃತ್ಯು
Update: 2025-05-16 21:00 IST
ಬೈಂದೂರು, ಮೇ 16: ಕೂರಾಡಿ -ಬೈಂದೂರು ರಸ್ತೆಯ ಮದ್ದೂಡಿ ಜಂಕ್ಷನ್ ಇಳಿಜಾರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯ ಗೊಂಡಿದ್ದ ಸ್ಕೂಟರ್ ಸವಾರರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಬೈಂದೂರು ಮಾಯ್ಯಡಿ ನಿವಾಸಿ ಪ್ರಕಾಶ್ ಎಂದು ಗುರುತಿಸ ಲಾಗಿದೆ. ಇವರು ಎ.25ರಂದು ಸ್ಕೂಟರಿನಲ್ಲಿ ದಿನೇಶ್ ಜೊತೆ ಹೋಗುತ್ತಿರು ವಾಗ ಸ್ಕೂಟರ್ ಹತೋಟಿ ತಪ್ಪಿರಸ್ತೆಗೆ ಬಿತ್ತೆನ್ನಲಾಗಿದೆ. ಇದರಿಂದ ಇಬ್ಬರು ಗಾಯಗೊಂಡಿದ್ದು, ಇವರಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಪ್ರಕಾಶ್ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೇ 15ರಂದು ಮಧ್ಯಾಹ್ನ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.