ಫಾಸ್ಟ್‌ಫುಡ್ ಅಂಗಡಿಗೆ ನುಗ್ಗಿ ಸೊತ್ತು ಕಳವು: ಪ್ರಕರಣ ದಾಖಲು
Update: 2025-05-16 21:03 IST
ಕೋಟ, ಮೇ 16: ಫಾಸ್ಟ್‌ಪುಡ್ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಮೇ 14ರಂದು ರಾತ್ರಿ ವೇಳೆ ಶಿರಿಯಾರ ಗ್ರಾಮದ ಶಿರ್ಣೆ ಕ್ರಾಸ್ ಬಳಿ ನಡೆದಿದೆ.
ಚೇತನ್ ಎಂಬವರ ನಂದಿಕೇಶ್ವರ ಫಾಸ್ಟ್‌ಫುಡ್ ಅಂಗಡಿಯ ಹಿಂಬದಿಯ ಸೀಟನ್ನು ಕತ್ತರಿಸಿ ಒಳನುಗ್ಗಿದ ಕಳ್ಳರು, ಎರಡು ಬ್ಯಾಟರಿಗಳು, ಇನ್ವರ್ಟರ್, ತಿಂಡಿ ತಿನಿಸುಗಳು, ಗ್ಯಾಸ್ ಸಿಲಿಂಡರ್, ಸ್ಟೀಲ್ ಟೇಬಲ್ ಮತ್ತು ಪಾತ್ರೆ ಪಗಡೆಗಳು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 98,000ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.