×
Ad

ಏಕ ವಿನ್ಯಾಸ ನಕ್ಷೆ ವಿತರಿಸುವ ಅಧಿಕಾರ ಗ್ರಾಪಂಗೆ ಮರಳಿಸಲು ಸಿಎಂಗೆ ಕೋಟ ಮನವಿ

Update: 2025-05-17 18:21 IST

ಉಡುಪಿ: ಈವರೆಗೆ ಗ್ರಾಪಂಗಳು ನೀಡುತ್ತಿದ್ದ ಏಕ ವಿನ್ಯಾಸ ನಕ್ಷೆ(9/11) ವಿತರಣೆಯ ಹಕ್ಕು ಗ್ರಾಪಂ ಮತ್ತು ತಾಪಂ ಅಧಿಕಾರ ಮೊಟಕುಗೊಂಡು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿದ್ದು, ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿರುವುದರಿಂದ ಆ ಅಧಿಕಾರವನ್ನು ವಾಪಾಸ್ಸು ಗ್ರಾಪಂ ಗಳಿಗೆ ನೀಡಬೇಕು ಎಂದು ಆಗ್ರಹಿಸಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.

ರಾಜ್ಯ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ಈ ಸರಕಾರಿ ಆದೇಶದಿಂದ ಉಡುಪಿ, ದಕ್ಷಿಣಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳು ಸೇರಿದಂತೆ, ರಾಜ್ಯದ ಕೆಲವೆಡೆ ಜನಸಾಮಾನ್ಯರಿಗೆ ವಾಸ್ತವ್ಯದ ಮನೆ ನಿರ್ಮಿಸಲು ವಿನ್ಯಾಸದ ನಕ್ಷೆಗೆ ಪ್ರಾಧಿಕಾರಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆರಡು ವಾರದಲ್ಲಿ ಗ್ರಾಮ ಪಂಚಾಯತ್‌ಗಳ ಮೂಲಕ ಸಿಗುತ್ತಿದ್ದ 9/11 ನಕ್ಷೆಗಳು, ಆರೇಳು ತಿಂಗಳಾದರೂ ಸಿಗುತ್ತಿಲ್ಲ.

ಅಲ್ಲದೆ ಪ್ರಾಧಿಕಾರದ ನಡುವೆ ಮಧ್ಯವರ್ತಿಗಳ ಕಾಟ ಅತಿಯಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಉಡುಪಿ ಜಿಲ್ಲೆಯೊಂದರಲ್ಲೇ 10,000ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಉಳಿದುಕೊಂಡಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ತಾವು ಮಧ್ಯಪ್ರವೇಶಿಸಿ ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಿ ಗ್ರಾಮ ಪಂಚಾಯತ್‌ಗಳ ಮೂಲಕ ಏಕ ವಿನ್ಯಾಸ ನಕ್ಷೆ ನೀಡುವ ಹಕ್ಕನ್ನು ಮರಳಿಸಿ ಜನಸಾಮಾನ್ಯರ ತೊಂದರೆ ನಿವಾರಿಸಬೇಕು. ಗ್ರಾಪಂನಿಂದ 9/11 ನೀಡುವ ಜವಾಬ್ದಾರಿ ವಿರಹಿತಪಡಿ ಸಿರುವುದು ಸಂವಿಧಾನದ 73ನೇ ಕಲಂ ತಿದ್ದುಪಡಿಯ ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಗೆ ಧಕ್ಕೆಯಾ ಗುವ ಆತಂಕವಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ನಗರಾಭಿವೃದ್ಧಿ ಇಲಾಖೆ ರಾಜ್ಯದ ಉಚ್ಚ ನ್ಯಾಯಾಲಯದ ಆದೇಶದತ್ತ ಬೆಟ್ಟು ತೋರಿಸುತ್ತಿದ್ದು, ವಾಸ್ತವಿಕ ವಾಗಿ ನ್ಯಾಯಾಲಯ ನಿಯಮ ಉಲ್ಲಂಘನೆಯ ಬಗ್ಗೆ ಸೂಕ್ತ ರೂಪುರೇಷೆ ತಯಾರಿಸಲು ನಿರ್ದೇಶಿಸಿದ್ದು, ಯಾವುದೇ ಕಾರಣಕ್ಕೂ ಪಂಚಾಯತ್ ಆಡಳಿತದ ಹಕ್ಕು ಮೊಟಕುಗೊಳಿಸಲು ಸೂಚಿಸಿಲ್ಲ. ಈ ಹಿನ್ನಲೆ ಯಲ್ಲಿ ಅಗತ್ಯವಿದ್ದರೆ ಸಚಿವ ಸಂಪುಟದ ಅನುಮೋದನೆ ಪಡೆದು ಈ ಹಿಂದಿನ ಪದ್ಧತಿಯಂತೆ ಒಂದು ಎಕ್ರೆ ಪ್ರದೇಶದ ಒಳಗಿನ ವಿಸ್ತೀರ್ಣದ ಪ್ರದೇಶದ ಏಕ ವಿನ್ಯಾಸದ ನಕ್ಷೆ ನೀಡುವ ಅಧಿಕಾರವನ್ನು ಪಂಚಾಯತ್ ರಾಜ್ ಇಲಾಖೆಗೆ ಮರಳಿಸಬೇಕು ಎಂದು ಕೋಟ ಮನವಿಯಸಘೆಲ್ಲಿ ಕೋಟ ಮನವಿಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News