×
Ad

ವಿದ್ಯಾರ್ಥಿಗಳಿಂದ ‘ಮನೋವಿಕಾಸ’ ಬೀದಿನಾಟಕ ಪ್ರದರ್ಶನ

Update: 2025-05-17 18:23 IST

ಶಿರ್ವ, ಮೇ 17: ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಆಸರೆ ಸಮಾಲೋಚನಾ ಘಟಕದ ವತಿಯಿಂದ ತೃತೀಯ ವರ್ಷದ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳು ಮನೋವಿಕಾಸ ಎಂಬ ವಿಷಯದಡಿ ಬೀದಿ ನಾಟಕವನ್ನು ಪ್ರದರ್ಶಿಸಿದರು.

ಮಾನಸಿಕ ಆರೋಗ್ಯದ ಮಹತ್ವ ಮತ್ತು ಜೀವನದಲ್ಲಿ ಎದುರಾಗುವ ಒತ್ತಡ ಸಮಸ್ಯೆಗಳನ್ನು ಎದುರಿಸುವಲ್ಲಿ ಸಮಾಲೋಚನ ಘಟಕದ ಅವಶ್ಯಕತೆಯ ಜಾಗೃತಿ ಮೂಡಿಸುವುದು ಈ ನಾಟಕದ ಉದ್ದೇಶವಾಗಿದೆ.

ಈ ಬೀದಿನಾಟಕವನ್ನು ದ್ವಿತೀಯ ವರ್ಷದ ಗಣಕಯಂತ್ರ ವಿಭಾಗದ ಚೈತನ್ಯ ಎಸ್.ಮಯ್ಯಾ ನಿರ್ದೇಶಿಸಿ ದರು. ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕವನ್ನು ಪಡೆಯದ ವಿದ್ಯಾರ್ಥಿಯ ಕಥೆ ಮತ್ತು ವೃತ್ತಿಪರ ಕೋರ್ಸ್‌ಗೆ ಸೇರಿದ ನಂತರ ಕೆಟ್ಟ ಗೆಳೆಯರ ಒಡನಾಟದಿಂದ ತಪ್ಪು ಮಾರ್ಗದಲ್ಲಿ ನಡೆದ ವಿದ್ಯಾರ್ಥಿಯ ಕಥೆಯನ್ನು ಪ್ರದರ್ಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News