×
Ad

ಪ್ರವಾಸಿ ತಾಣ ಮಲ್ಪೆ ಸೈಂಟ್‌ಮೇರಿಸ್ ದ್ವೀಪ ಪ್ರವೇಶಕ್ಕೆ ನಿರ್ಬಂಧ

Update: 2025-05-17 18:38 IST

ಮಲ್ಪೆ, ಮೇ 17: ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣ ಮಲ್ಪೆ ಸೈಂಟ್‌ಮೇರಿಸ್ ದ್ವೀಪ ಪ್ರವೇಶಕ್ಕೆ ಇನ್ನು ನಾಲ್ಕು ತಿಂಗಳ ಕಾಲ ನಿರ್ಬಂಧ ಹೇರಲಾಗಿದ್ದು ಜತೆಗೆ ಎಲ್ಲ ಜಲಸಾಹಸ ಕ್ರೀಡೆಗಳನ್ನು ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮಳೆಗಾಲದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿರುವುದರಿಂದ ದ್ವೀಪಕ್ಕೆ ತೆರಳುವುದು ಅಪಾಯಕಾರಿಯಾಗಿದ್ದು, ಈ ಕಾರಣಕ್ಕೆ ಪ್ರತಿ ವರ್ಷ ಮೇ 15ರಿಂದ ಸೆ.15ರವರೆಗೆ ಸೈಂಟ್ ಮೇರಿಸ್ ದ್ವೀಪ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ವಿಧಿಸುತ್ತದೆ.

ಹಾರ್ಬರ್ ಕ್ರಾಫ್ಟ್ ನಿಯಮಗಳ ಅನ್ವಯ ಮೇ 16ರಿಂದ 4 ತಿಂಗಳುಗಳ ಕಾಲ ಸಮುದ್ರದಲ್ಲಿ ಪ್ರವಾಸಿ ಬೋಟು ಮತ್ತು ಜಲಸಾಹಸ ಕ್ರೀಡೆಗಳನ್ನು ನಿಷೇಧಿಸಲಾಗಿದೆ. ಪ್ರವಾಸಿಗರು ಬೀಚ್‌ನಲ್ಲಿ ವಾತಾವರಣದ ಪ್ರತಿಕೂಲತೆ ಯನ್ನು ನೋಡಿಕೊಂಡು ಜೂನ್ 1ರ ವರೆಗೆ ನೀರಿಗಿಳಿಯಲು ಮತ್ತು ಈಜಾಡ ಬಹುದಾಗಿದೆ. ಮಳೆಗಾಲದಲ್ಲಿ ಪ್ರವಾಸಿಗರು ನೀರಿಗಿಳಿಯದಂತೆ ಬೀಚ್ ಉದ್ದಕ್ಕೂ ತಡೆಬೇಲಿ ಹಾಕಿ ಸುರಕ್ಷೆಗೆ ಕ್ರಮ ಕೈಗೊಳ್ಳಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News