×
Ad

ಮಣಿಪಾಲ ಬಿಬಿಎ ವಿದ್ಯಾರ್ಥಿ ಆತ್ಮಹತ್ಯೆ

Update: 2025-05-19 20:55 IST

ಮಣಿಪಾಲ, ಮೇ 19: ಮಣಿಪಾಲದ ಸ್ಕೂಲ್ ಆಫ್ ಕಾಮರ್ಸ್ ಎಕೊನೋಮಿಕ್ ಅಕಾಡೆಮಿ ವಿದ್ಯಾರ್ಥಿ ಯೊಬ್ಬ ಅನುತ್ತೀರ್ಣಗೊಂಡ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ಮೃತರನ್ನು ಛತ್ತಿಸ್‌ಗಡದ ಅನ್ಶುಲ್ ಯಾದವ್ (21) ಎಂದು ಗುರುತಿಸ ಲಾಗಿದೆ. ಇವರು ಬಿಬಿಎ (ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಕಾಡೆಮಿ) ವ್ಯಾಸಾಂಗ ಮಾಡುತ್ತಿದ್ದು ಮಣಿಪಾಲದ ಎಂಐಟಿ ಹಾಸ್ಟೆಲ್‌ ನಲ್ಲಿ ವಾಸ್ತವ್ಯ ಮಾಡಿಕೊಂಡಿದ್ದರು. ಇವರು ತನ್ನ ಮೊದಲ ವರ್ಷದ ಸೆಕೆಂಡ್ ಸೆಮಿಸ್ಟರ್‌ನಲ್ಲಿ 4 ವಿಷಯ ಗಳಲ್ಲಿ ಅನುತ್ತೀರ್ಣಗೊಂಡ ವಿಚಾರದಲ್ಲಿ ಮನನೊಂದು ಮೇ 12ರಂದು ರಾತ್ರಿಯಿಂದ ಮೇ 18ರ ಬೆಳಗಿನ ಮಧ್ಯಾವಧಿಯಲ್ಲಿ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News