ಕೋಡಿ ಬ್ಯಾರಿಸ್‌ನಲ್ಲಿ ಕವಿ ವೆಂಕಟೇಶ್ ಮೂರ್ತಿಗೆ ಶ್ರದ್ಧಾಂಜಲಿ
ಕುಂದಾಪುರ, ಜೂ.3: ಕನ್ನಡದ ಕವಿ ಮತ್ತು ಬರಹಗಾರರು, ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ ಕನ್ನಡ ಸರಸ್ವತ ಲೋಕಕ್ಕೆ ತಮ್ಮದೇ ಆದ ಚಾಪನ್ನು ಮೂಡಿಸಿರುವ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಯನ್ನು ಸಲ್ಲಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಿದ್ದಪ್ಪಕೆ.ಎಸ್. ಮಾತನಾಡಿ, ಸಾಧಕರನ್ನು ಸ್ಮರಿಸಿ ಕೊಳ್ಳಬೇಕು ಮತ್ತು ಅವರ ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳ ಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಬ್ಯಾರಿಸ್ ಸಮೂಹ ಶಿಕ್ಷಣದ ಅಧ್ಯಕ್ಷ ಅಬ್ದುಲ್ ರೆಹಮಾನ್ ವಹಿಸಿದ್ದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆಯನ್ನು, ನಮ್ಮನ್ನು ಅಗಲಿದ ಎಚ್.ಎಸ್.ವೆಂಕಟೇಶ್ ಮೂರ್ತಿ ಅವರ ಸಾಧನೆಯನ್ನು ಕುರಿತು ಬಿಇಡಿ ಪ್ರಶಿಕ್ಷಣಾರ್ಥಿಗಳು ಮಾತನಾಡಿದರು. ಇನ್ನು ಕೆಲವು ವಿದ್ಯಾರ್ಥಿ ಗಳು ಅವರು ರಚಿಸಿದ ಭಾವಗೀತೆಗಳನ್ನು ಹಾಡುವ ಮೂಲಕ ಗೀತ ಗೌರವವನ್ನೂ ಸಲ್ಲಿಸಲಾಯಿತು.
ಉಪ ಪ್ರಾಂಶುಪಾಲ ಪ್ರವೀಣ್ ಕುಮಾರ್ ಕೆ.ಪಿ., ಡಿಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಫಿರ್ದೋಸ್ ಹಾಗೂ ಸಂಸ್ಥೆಯ ಎಲ್ಲಾ ಸಹಾಯಕ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಅನಂತ್ ಭಟ್ ಪ್ರಸ್ತಾವಿಕ ನುಡಿಗಳನಾಡಿದರು. ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿಯಾದ ಅನಿತಾ ಸ್ವಾಗತಿಸಿದರು, ಪೂಜಾ ವಂದಿಸಿದರು. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.