×
Ad

ಛಾಯಾಚಿತ್ರ ಸ್ಪರ್ಧೆ: ಆಸ್ಟ್ರೋ ಮೋಹನ್‌ಗೆ ಚಿನ್ನದ ಪದಕ

Update: 2025-06-09 21:59 IST

ಉಡುಪಿ, ಜೂ.೯: ಹಿರಿಯ ಛಾಯಾಗ್ರಾಹಕ ಅಸ್ಟ್ರೋ ಮೋಹನ್ ಇಟೆಲಿಯಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಎರಡು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಅವರ ಭಾವನಾತ್ಮಕ ಛಾಯಾಚಿತ್ರ ‘ಶ್ವಾಸಕ್ಕಾಗಿ ಹೋರಾಟ’ ಇದಕ್ಕೆ ‘ಗ್ರಾನ್ ಪ್ರಿಕ್ಸ್ ಜಾಫರಿ’ ಚಿನ್ನದ ಪದಕ ಹಾಗೂ ಗ್ರಾನ್ ಪ್ರಿಕ್ಸ್ ರುಬಿನಿ ಅತ್ಯುತ್ತಮ ಕೃತಿ ಪತ್ರಿಕೋದ್ಯಮ ಛಾಯಾಚಿತ್ರ ಥೀಮ್(ಬಣ್ಣ/ಕಪ್ಪುಬಿಳುಪಿನಲ್ಲಿ) ಗೌರವ ಲಭಿಸಿದೆ.

ಇವರು ಈಗಾಗಲೇ 800ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿಗಳನ್ನು ಗಳಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಕ್ಯಾನಾನ್ ಇಂಡಿಯಾದ ಕ್ಯಾನನ್ ಇಓಎಸ್ ಮೆಸ್ಟ್ರೋ ಹಾಗೂ ಹಲವಾರು ಅಂತಾ ರಾಷ್ಟ್ರೀಯ ಛಾಯಾಗ್ರಾಹಕ ಸಂಸ್ಥೆಗಳ ಗೌರವಾನ್ವಿತ ಸದಸ್ಯರಾಗಿದ್ದಾರೆ. ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸಾದದ್ಯರೂ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News