ಭಜನಾ ದಿಂಡಿ ಮಹೋತ್ಸವ ಮೆರವಣಿಗೆ
Update: 2025-06-10 21:01 IST
ಉಡುಪಿ, ಜೂ.10: ಉಡುಪಿ ತೆಂಕಪೇಟೆಯ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ನಡೆದ 125 ದಿನ ಅಹೋರಾತ್ರಿ ಭಜನಾ ಮಹೋತ್ಸವದ ಅಂಗವಾಗಿ ನಡೆದ ಭಜನಾ ದಿಂಡಿ ಮಹೋತ್ಸವದ ಮೆರವಣಿಗೆ ಯಲ್ಲಿ ವಿಠಲ, ರುಖುಮಾಯಿ, ಸಂತ ತುಕಾರಾಮರ ವೇಷಧಾರಿಗಳ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು.
ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದ ಈ ಭವ್ಯ ಮೆರವಣಿಗೆಯಲ್ಲಿ ಎಂ.ಆರ್.ಪೈ ಅಂಬಾಗಿಲು ತುಕಾರಾಮನಾಗಿ, ಕೆ.ಸಂಧ್ಯಾ ಎಸ್.ಪೈ ವಿಠಲ ಪಾತ್ರಧಾರಿಯಾಗಿ ಹಾಗೂ ಕೆ.ದೀಪಾ ಆರ್.ಪೈ ಉಡುಪಿ ರುಖುಮಾಯಿ ಪಾತ್ರಧಾರಿಯಾಗಿ ವೇಷ ಧರಿಸಿ ಭಾಗವಹಿಸಿದ್ದರು. ಈ ಭವ್ಯ ಮೆರವಣಿಗೆ ಆಕರ್ಷಣೀಯವಾಗಿತ್ತು.