×
Ad

ಕುಂದಾಪುರ| ಚಿಲ್ಲರೆ ವಿಚಾರಕ್ಕೆ ಯುವತಿಗೆ ಹಲ್ಲೆ: ಆರೋಪಿ ಮಹಿಳೆಯ ಬಂಧನ

Update: 2025-06-10 21:06 IST

ಕುಂದಾಪುರ, ಜೂ.10: ಚಿಲ್ಲರೆ ವಿಷಯಕ್ಕೆ ಮಾವಿನಕಟ್ಟೆ ಮೆಡಿಕಲ್ ಶಾಪ್‌ನ ಯುವತಿಗೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಮಹಿಳೆಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿ ಯಾಸ್ಮೀನ್ ಬಂಧಿತ ಆರೋಪಿ. ಜೂ.9ರಂದು ಔಷಧಿ ಖರೀದಿಸಿದ ಯಾಸ್ಮಿನ್, 500ರೂ. ಚಿಲ್ಲರೆ ವಿಚಾರದಲ್ಲಿ ಮೆಡಿಕಲ್‌ನ ಉದ್ಯೋಗಿ ಯುವತಿ ಜೊತೆ ಗಲಾಟೆ ಮಾಡಿದ್ದರು. ಬಳಿಕ ಯಾಸ್ಮೀನ್ ಯುವತಿಗೆ ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ.

ಈ ಕುರಿತ ಸಿಸಿಟಿವಿ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News