ಜಿದ್ದಾ: ಸ್ಪೀಕರ್ ಯು.ಟಿ.ಖಾದರ್‌ಗೆ ಡಿಕೆಎಸ್‌ಸಿಯಿಂದ ಗೌರವ
ಉಡುಪಿ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ಇದರ ಮಕ್ಕತುಲ್ ಮುಕರ್ರಮ ವಲಯ ಸಮಿತಿಯ ವತಿಯಿಂದ ಪವಿತ್ರ ಹಜ್ಜ್ ನಿರ್ವಹಿಸಿ ಜಿದ್ದಾಗೆ ಆಗಮಿಸಿದ ಕರ್ನಾಟಕ ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಹಾಗೂ ಹಾಜಿ ಯು.ಟಿ.ಇಫ್ತಿಖಾರ್ ಅವರನ್ನು ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಯು.ಟಿ.ಖಾದರ್, ಖುದ್ವತುಸ್ಸಾದಾತ್ ಸಯ್ಯಿದ್ ಕೆಎಸ್ ಆಟಕ್ಕೋಯ ತಂಳ್ ಕುಂಬೋಳ್ ನೇತೃತ್ವದಲ್ಲಿ ಡಿಕೆಎಸ್‌ಸಿ ವಿಶ್ವಾಸಾರ್ಹ ಸಂಘಟನೆಯಾಗಿ ಜನ ಮನ್ನಣೆ ಪಡೆದಿದ್ದು, ಇದೀಗ ಪವಿತ್ರ ಹಜ್ ನಿರ್ವಹಿಸಿ ಪ್ರಪ್ರಥಮವಾಗಿ ಡಿಕೆಎಸ್‌ಸಿಯ ಸಭೆಯಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದರು.
ಸೌಹಾರ್ದತೆಯೊಂದಿಗೆ ಶಿಕ್ಷಣ ಕ್ರಾಂತಿಯನ್ನು ನಡೆಸುತ್ತಿರುವ ನಿಮ್ಮೊಂದಿಗೆ ಸದಾ ಕಾಲ ನಾನು ಇರುವು ದರೊಂದಿಗೆ ಸರಕಾರದ ವತಿಯಿಂದ ಸಿಗುವ ಸವಲತ್ತನ್ನು ಒದಗಿಸಲು ಕಟಿಬದ್ದನಾಗಿದ್ದೇನೆ ಮತ್ತು ಈ ಸಂಸ್ಥೆ ಶೀಘ್ರದಲ್ಲಿ ಮಹಾವಿದ್ಯಾಲಯವಾಗಿ ಉನ್ನತಿಗೇರಲಿ ಎಂದು ಅವರು ಶುಭ ಹಾರೈಸಿದರು.
ಕೇಂದ್ರ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲ, ಕೇಂದ್ರ ಸಮಿತಿ ಉಪಾಧ್ಯಕ್ಷ, ವಿಝನ್ 30 ಸಮಿತಿಯ ಚೆಯರ್ ಮೆನ್ ಹಾತಿಂ ಕೂಳೂರು, ಕೇಂದ್ರ ಸಂವಹಣ ಕಾರ್ಯದರ್ಶಿ ರಫೀಕ್ ಸೂರಿಂಜೆ, ವಿಝನ್ 30 ಸಮಿತಿಯ ಪ್ರಮುಖರಾದ ಅಬ್ದುಲ್ ಅಝೀಝ್ ಮೂಳೂರು, ಮಕ್ಕಾ ವಲಯದ ಪ್ರಮುಖರಾದ ಇಬ್ರಾಹಿಂ ಕಣ್ಣಂಗಾರ್, ಹಸನ್ ರಜಬ್ ಯಡೂರು, ಫಝಲ್ ಸೂರಿಂಜೆ, ಇಬ್ರಾಹಿಂ ಬಂಡಾಡಿ, ಅಬ್ದುಲ್ ಮಜೀದ್ ಕಣ್ಣಂಗಾರ್ ಉಪಸ್ಥಿತರಿದ್ದರು.