ಬಾವಿಗೆ ಬಿದ್ದು ಮಹಿಳೆ ಮೃತ್ಯು
Update: 2025-06-11 21:22 IST
ಶಿರ್ವ: ಬಾವಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜೂ.10ರಂದು ಬೆಳಗ್ಗೆ ಶಿರ್ವದಲ್ಲಿ ನಡೆದಿದೆ.
ಮೃತರನ್ನು ಶಿರ್ವ ನಿವಾಸಿ ಜ್ಯೋತಿ ಉದಯ ಕುಮಾರ್ ಹೆಗ್ಡೆ(55) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಇಲ್ಲದ ತಾಯಿಯನ್ನು ಮಗಳು ಹುಡುಕಾಡಿ ದಾಗ ಅವರ ಚಪ್ಪಲಿ ಮನೆಯ ಬಾವಿಯ ಬಳಿ ಕಂಡುಬಂದಿದ್ದು, ಬಾವಿಯನ್ನು ಇಣಿಕಿ ನೋಡಿದಾಗ ಒಳಗಡೆ ನೀರಿನಲ್ಲಿ ಜ್ಯೋತಿ ಅವರ ಮೃತದೇಹ ಕಂಡು ಬಂದಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.