×
Ad

ಉಡುಪಿ: ವಿವಿಧ ಠಾಣೆಗಳಲ್ಲಿ ಮಾದಕ ದ್ರವ್ಯ ವಿರುದ್ಧ ಜಾಗೃತಿ ಕಾರ್ಯಕ್ರಮ

Update: 2025-06-26 19:50 IST

ಉಡುಪಿ: ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ದಿನಾಚ ರಣೆ ಅಂಗವಾಗಿ ಗುರುವಾರ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ನಿಟ್ಟೆ ವಿದ್ಯಾ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯದ ಬಗ್ಗೆ ಜಾಗೃತಿ ಕಾರ್ಯ ಕ್ರಮದ ಅಂಗವಾಗಿ ಚಿತ್ರಕಲೆ ಮತ್ತು ಪ್ರಬಂಧ ಸ್ಫರ್ಧೆ ಏರ್ಪಡಿಸಲಾಗಿದ್ದು, ಸುಮಾರು 600 ವಿದ್ಯಾರ್ಥಿ ಗಳು ಹಾಗೂ ಸಂಸ್ಥೆಯ ಅಧ್ಯಾಪಕರು ಮತ್ತು ಸಿಬ್ಬಂದಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಹರ್ಷ ಪ್ರಿಯಂವದ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನದ ಜಾಗೃತಿ ಬಗ್ಗೆ ಮಾಹಿತಿ ನೀಡಿದರು.

ಮಲ್ಪೆಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಪೆಬೀಚ್‌ನಲ್ಲಿ ಮರಳು ಶಿಲ್ಪ ಕಲಾವಿದರಾದ ರವಿ ಮತ್ತು ಲೋಕೇಶ್ ಮರಳಿನಲ್ಲಿ ಶಿಲ್ಪಕಲೆ ಅರಳಿಸಿ ನಶಾ ಮುಕ್ತ ಉಡುಪಿ ಎನ್ನುವ ಘೋಷವಾಕ್ಯ ಬಿಡಿಸಿ ಮಾದಕ ದ್ರವ್ಯಗಳ ಬಗ್ಗೆ ಜನಜಾಗೃತಿ ಮೂಡಿಸಿದರು.

ಕಾರ್ಕಳ ಉಪವಿಭಾಗದ ಕಾಪು ವೃತ್ತ ಶಿರ್ವ ಪೋಲಿಸ್ ಠಾಣೆ, ಸಂತ ಮೇರಿ ಪದವಿ ಪೂರ್ವ ಕಾಲೇಜು, ಎಸ್‌ಎಸ್‌ಎಸ್ ಘಟಕ ಮತುತಿ ಶಿರ್ವ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಪ್ರಯುಕ್ತ ಶಿರ್ವ ಕಾಲೇಜಿನಿಂದ ಶಿರ್ವ ಪೇಟೆಯವರೆಗೆ ಜನಜಾಗೃತಿ ಜಾಥಾವನ್ನು ಆಯೋಜಿಸಲಾಯಿತು.

ಶಿರ್ವ ಪೇಟೆಯಲ್ಲಿ ಜರಗಿದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಪು ವೃತ್ತ ನಿರೀಕ್ಷಕ ಜಯಶ್ರೀ ಮಾನೆ, ಶಿರ್ವ ರೋಟರಿ ಕ್ಲಬ್ ಕಾರ್ಯದರ್ಶಿ ಹೊನ್ನಯ್ಯ ಶೆಟ್ಟಿಗಾರ್, ಸಂತಮೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಯ ಶಂಕರ್ ಮಾತನಾಡಿದರು. ಎಎಸೈ ಶ್ರೀಧರ್ ಕೆ.ಜೆ., ಶಿರ್ವ ಪೊಲಿಸ್ ಉಪನಿರೀಕ್ಷ ಮಂಜುನಾಥ ಮರಬದ ಉಪಸ್ಥಿತರಿದ್ದರು.

ಜಿಲ್ಲೆಯ ಇತರ ಪೊಲೀಸ್ ಠಾಣೆಗಳಲ್ಲಿ ವಿವಿಧ ಜಾಗೃತಿ ಕಾರ್ಯುಕ್ರಮ ಗಳನ್ನು ಹಮ್ಮಿಕೊಂಡು, ಆಯಾ ಠಾಣಾ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News