×
Ad

ಉಡುಪಿ ಶ್ರೀಕೃಷ್ಣ ಮಠದ ಮಂಡಲೋತ್ಸವ ಉದ್ಘಾಟನೆಗೆ ಸಿಎಂ ಆಹ್ವಾನ

Update: 2025-06-27 20:44 IST

ಉಡುಪಿ, ಜೂ.27: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಆಗಸ್ಟ್ ತಿಂಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಯುವ 48 ದಿನಗಳ ಮಂಡಲೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಯಿತು.

ಆಗಸ್ಟ್ ಒಂದರಿಂದ 48 ದಿನಗಳ ಕಾರ್ಯಕ್ರಮ ಉದ್ಘಾಟನೆಗೊಂಡು ಸೆಪ್ಟೆಂಬರ್ 15ರವರೆಗೆ ಮಂಡಲೋ ತ್ಸವ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣರ ಪ್ರಸಾದ ವನ್ನು ಮುಖ್ಯಮಂತ್ರಿಗೆ ನೀಡಲಾಯಿತು.

ಮಠದ ಪರವಾಗಿ ಬೆಂಗಳೂರು ಶಾಖಾ ಮಠದ ಮುಖ್ಯಸ್ಥ ಏ.ಬಿ. ಕುಂಜಾರ್ ಮತ್ತು ಪುತ್ತಿಗೆ ಸ್ವಾಮೀಜಿಯ ಕಾರ್ಯದರ್ಶಿ ರತೀಶ್ ತಂತ್ರಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News