ಕಂಡ್ಲೂರು: ಬೃಹತ್ ರಕ್ತದಾನ ಶಿಬಿರ ಉದ್ಘಾಟನೆ
ಕುಂದಾಪುರ, ಜೂ.29 ಜಿಲ್ಲಾ ಮೊಗವೀರ ಯುವ ಸಂಘಟನೆ ಕುಂದಾಪುರ ತಾಲೂಕು, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಶ್ರೀರಾಮ ಭಜನಾ ಮಂದಿರ ಹಳೆಕೋಟೆ, ಶ್ರೀಗಣೇಶೋತ್ಸವ ಸಮಿತಿ ಕಂಡ್ಲೂರು, ಶ್ರೀ ವೀರ ಮಾರುತಿ ಭಜನಾ ಮಂಡಳಿ ಹಳನಾಡು, ಶ್ರೀಶಾರದೋತ್ಸವ ಸಮಿತಿ, ಕನ್ನಿಕಾ ಫ್ರೆಂಡ್ಸ್ ಕಂಡ್ಲೂರು, ಶ್ರೀಮಹಾಗಣಪತಿ ಭಜನಾ ಮಂಡಳಿ ಹಳನಾಡು ಹಾಗೂ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಸಂಯುಕ್ತ ಆಶ್ರಯದಲ್ಲಿ ರವಿವಾರ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯಂತ್ ಅಮೀನ್ ಕೋಡಿ ಮಾತನಾಡಿ, ರಕ್ತದಾನ ಒಂದು ಪವಿತ್ರವಾದ ದಾನವಾಗಿದೆ. ಇದರಿಂದ ಒಂದು ಜೀವವನ್ನು ಉಳಿಸಬಹು ದಾಗಿದೆ. ತುರ್ತು ಸಂದರ್ಭದಲ್ಲಿ ರಕ್ತ ಅಮೂಲ್ಯ ಪಾತ್ರ ವಹಿಸುತ್ತದೆ ಎಂದರು.
ಮೊಗವೀರ ಸಂಘಟನೆಯ ಕುಂದಾಪುರ ತಾಲೂಕು ಅಧ್ಯಕ್ಷ ನಾಗೇಶ್ ಮೊಗವೀರ ಹಳನಾಡು ಅಧ್ಯಕ್ಷತೆ ವಹಿಸಿದ್ದರು. ಕಾವ್ರಾಡಿ ಗ್ರಾಪಂ ಉಪಾಧ್ಯಕ್ಷ ಸುರೇಶ್ ಶೆಟ್ಟಿ, ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಕಾರಿ ಡಾ. ಸುಬ್ರಾಯ ಕಾಮತ್, ಕುಂದಾಪುರ ರಕ್ತ ನಿಧಿ ಕೇಂದ್ರದ ಅಧ್ಯಕ್ಷ ಎಸ್.ಜಯಕರ ಶೆಟ್ಟಿ, ಗ್ರಾಪಂ ಸದಸ್ಯ ವಿಜಯ ಪುತ್ರನ್, ಮಾಧವ ಕುಂದಾಪುರ, ಚಂದ್ರಹಾಸ, ಕಿರಣ್ ಹಳನಾಡು, ಸಂದೀಪ ಶೆಟ್ಟಿ, ಉದಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಅಶೋಕ್ ಕೆರೆಕಟ್ಟೆ, ಜಯಂತ್ ಅಮೀನ್, ನಾಗೇಶ್ ಹಳನಾಡು, ಅಣ್ಣಪ್ಪ ಆಚಾರ್, ಚಂದ್ರ ಅವರನ್ನು ಸಮ್ಮಾನಿಸಲಾಯಿತು. ಸದಾನಂದ ಬಳ್ಕೂರು ಸ್ವಾಗತಿಸಿ, ಸುಧಾಕರ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು.