×
Ad

ಉಚಿತ ಯಕ್ಷಗಾನ ತರಬೇತಿ ಕಾರ್ಯಕ್ರಮ ಉದ್ಘಾಟನೆ

Update: 2025-06-29 19:29 IST

ಉಡುಪಿ, ಜೂ.29: ಪಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಕ್ಷಧ್ರುವ ಯಕ್ಷ ಶಿಕ್ಷಣ, ಯಕ್ಷಗಾನ ಶಿಕ್ಷಣ ಅಭಿಯಾನ ಯಕ್ಷಧ್ರುವ ಪಟ್ಲ ಫೌಂಡೇಶನ್ ಪಳ್ಳಿ -ನಿಂಜೂರು ಘಟಕದ ಸಹಯೋಗದಲ್ಲಿ 2025-26ನೇ ಸಾಲಿನ ಉಚಿತ ಯಕ್ಷಗಾನ ತರಬೇತಿ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮವನ್ನು ಪಳ್ಳಿ-ನಿಂಜೂರು ಘಟಕದ ಗೌರವಾಧ್ಯಕ್ಷ ಭರತ್ ಹೆಗ್ಡೆ ಪಳ್ಳಿ ಉದ್ಘಾಟಿಸಿ ಶುಭ ಹಾರೈಸಿ ದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ, ಗುರು ಸುರೇಶ್ ಮರ್ಣೆ, ಪಟ್ಲ-ಫೌಂಡೇಶನ್ ಪಳ್ಳಿ -ನಿಂಜೂರು ಘಟಕದ ಅಧ್ಯಕ್ಷ ಸುನಿಲ್ ಶೆಟ್ಟಿ, ಘಟಕದ ಉಪಾಧ್ಯಕ್ಷ ರಮಾನಂದ ಕಿಣಿ, ಘಟಕದ ಕೋಶಾಧಿಕಾರಿ ನಿಧೀಶ್ ಆಚಾರ್ಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಭಾಕರ ಬಂಗೇರ, ಕಲಾ ಪೋಷಕ ಸುರೇಶ್ ಪಾಣರ ಉಪಸ್ಥಿತರಿದ್ದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಪಳ್ಳಿ -ನಿಂಜೂರು ಘಟಕದ ಸಂಚಾಲಕ ಸುನಿಲ್ ಕೋಟ್ಯಾನ್ ಮಾತನಾಡಿ ದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಪ್ರೇಮಲತಾ ಸ್ವಾಗತಿಸಿದರು. ಸಹ ಶಿಕ್ಷಕಿ ಜುಸ್ತಿನಾ ಲುಸಿಲ್ಲಾ ಫೆರಾವೋ ವಂದಿಸಿದರು. ಶಿಕ್ಷಕಿ ಚಿತ್ರಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News