ಉಡುಪಿ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಕಚೇರಿ ಉದ್ಘಾಟನೆ
ಉಡುಪಿ, ಜೂ.29: ನಗರದ ಕೋರ್ಟ್ ಹಿಂಭಾಗದ ರಸ್ತೆಯ ತೊನ್ಸೆ ರೆಸಿಡೆನ್ಸಿ ಕಟ್ಟಡದಲ್ಲಿ ಆರಂಭಿಸಲಾದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಉಡುಪಿ ಜಿಲ್ಲೆ ಇದರ ಸ್ವಂತ ಜಿಲ್ಲಾ ಕಛೇರಿಯನ್ನು ಸಂಘದ ಗೌರವ ರಾಜ್ಯಾಧ್ಯಕ್ಷ ಸಿ.ರಮೇಶ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ವಿದ್ಯುತ್ ಗುತ್ತಿಗೆದಾರರು ಸಮಾಜಕ್ಕೆ ಬೇಕಾಗಿರುವ ಅತೀ ಮುಖ್ಯ ವ್ಯಕ್ತಿಗಳಾಗಿದ್ದು, ನಮ್ಮ ಪ್ರಾಮಾಣಿಕ ಸೇವೆ ಸದಾ ಸಮಾಜಕ್ಕೆ ದೊರಕುತ್ತ ಇರಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಶೆಣೈ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಕಾರ್ಯಧ್ಯಕ್ಷ ಶ್ಯಾಮ ಸುಂದರ, ರಾಜ್ಯ ಉಪಾಧ್ಯಕ್ಷ ಎಂ.ಎನ್.ಉಮೇಶ್ ಶೆಣೈ, ಉರ್ಬನ್ ಪಿಂಟೋ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ವಿ.ಚಂದ್ರಬಾಬು, ಸಂಘಟನಾ ಕಾರ್ಯದರ್ಶಿ ಶಿವಾನಂದ ಬಾಳಪ್ಪನವರ್, ಕೇಂದ್ರ ಕ್ರೀಡಾ ಚಯರ್‌ಮ್ಯಾನ್ ಮಲ್ಲಿಕಾರ್ಜುನ ರೆಡ್ಡಿ, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಐ.ಬಿ. ಶಿವರಾಜ್, ಪ್ರಭಾಕರ್ ರಾವ್ ನೇರಂಬಳ್ಳಿ, ರವಿರಾಜ್ ಶೆಟ್ಟಿ, ಕೇಂದ್ರ ಕ್ರೀಡಾ ಸಮಿತಿಯ ವೈಸ್ ಚಯರ್‌ಮ್ಯಾನ್ ರಿಚಾರ್ಡ್ ಮಿರಾಂಡ, ಕೇಂದ್ರ ಸಮಿತಿಯ ಯುವ ಸಂಘಟನಾ ಸಂಚಾಲಕ ಅಶೋಕ್ ಪೂಜಾರಿ ಹೇರೂರು, ಕೇಂದ್ರ ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕ ದಿನೇಶ್ ಕುಮಾರ್ ಕಡ್ತಲ, ಮಾಧ್ಯಮ ವಕ್ತಾರ ಅನ್ವರ್ ಅಲಿ ಕಾಪು, ನಿಕಟಪೂರ್ವ ಜಿಲ್ಲಾಧ್ಯಕ್ಷ ನಾಗರಾಜ್ ರಾವ್, ನಿಕಟಪೂರ್ವ ಕಾರ್ಯದರ್ಶಿ ಆಲ್ಫೋನ್ಸ್ ಆಳ್ವ, ಜಿಲ್ಲಾ ಉಪಾಧ್ಯಕ್ಷ ಕೃಷ್ಣ ಕುಲಾಲ್, ಕಾರ್ಯದರ್ಶಿ ಸುರೇಶ್ ಪೂಜಾರಿ, ಜೊತೆ ಕಾರ್ಯದರ್ಶಿ ರವಿಚಂದ್ರ, ಸಂಘಟನಾ ಕಾರ್ಯದರ್ಶಿ ಜಯ ಸುದರ್ಶನ್ ಜೆ., ಜಿಲ್ಲಾ ಕೋಶಾಧಿ ಕಾರಿ ಆನಂದ ಶೇರಿಗಾರ್, ಕಟ್ಟಡದ ಮಾಲಕ ರಮೇಶ್ ಕಾಮತ್, ಶಾಂತ ಎಲೆಕ್ಟ್ರಿಕಲ್ಸ್‌ನ ಮಾಲಕ ಶ್ರೀಪತಿ ಭಟ್ ಉಪಸ್ಥಿರಿದ್ದರು.
ಜಿಲ್ಲಾ ಉಪಾಧ್ಯಕ್ಷ ಅಶೋಕ್ ಸುವರ್ಣ ಪ್ರಾಸ್ತವಿಕ ಭಾಷಣ ಮಾಡಿದರು. ಕಾರ್ಯದರ್ಶಿ ಸುರೇಶ್ ಪೂಜಾರಿ ವಂದಿಸಿದರು. ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.