ಉಡುಪಿ ಮಠದ ಪಾರ್ಥ ಸಾರಥಿ ಸುವರ್ಣ ರಥ ನಿರ್ಮಾಣಕ್ಕೆ ಚಾಲನೆ
ಉಡುಪಿ, ಜೂ.29: ಪರ್ಯಾಯ ಪುತ್ತಿಗೆ, ಶ್ರೀಕೃಷ್ಣ ಮಠದ ವತಿಯಿಂದ ಉಡುಪಿ ಶ್ರೀಕೃಷ್ಣ ದೇವರಿಗೆ ಸಮರ್ಪಿಸಲುದ್ದೇಶಿಸಲಾದ ಪಾರ್ಥ ಸಾರಥಿ ಸುವರ್ಣ ರಥ ನಿರ್ಮಾಣಕ್ಕೆ ಮಂತ್ರಾಲಯ ಶ್ರೀರಾಘ ವೇಂದ್ರ ಮಠಾೀಶ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಚಾಲನೆ ನೀಡಿದರು.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ತಮ್ಮ ಸಂನ್ಯಾಸ ಸುವರ್ಣ ಮಹೋತ್ಸವದ ಪ್ರಯುಕ್ತ ಈ ರಥವನ್ನು ನಿರ್ಮಿಸ ಲಾಗುತ್ತಿದೆ. ಬಳಿಕ ಮಾತನಾಡಿದ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ, 365 ದಿನವೂ ಉತ್ಸವ ನೆರವೇರಿಸುವ ಉದ್ದೇಶದಿಂದ ನಿರ್ಮಾಣಗೊಳ್ಳಲಿರುವ ಪಾರ್ಥ ಸಾರಥಿ ಸುವರ್ಣ ರಥಕ್ಕೆ ಶ್ರೀಮಠದ ವತಿಯಿಂದ 10 ಲಕ್ಷ ರೂ. ನೀಡಲಾಗುವುದೆಂದು ತಿಳಿಸಿದರು.
ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಇದು ಭಗವದ್ಗೀತೆಗೆ ಸಂಬಂಧಿ ಸಿದ ರಥ. ರಥದ ಕಾರ್ಯವನ್ನು ಶೀಘ್ರವೇ ಪೂರೈಸಿ ಶ್ರೀಕೃಷ್ಣನಿಗೆ ಸಮರ್ಪಿಸಲಾಗುವುದು ಎಂದು ಹೇಳಿದರು.
ಪರ್ಯಾಯ ಪುತಿತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಶಾಸಕರಾದ ಯಶಪಾಲ್ ಎ.ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಯೋಗೀಶ್ ಶೆಟ್ಟಿ ಕಾಪು, ಗಯಾ ರಾಮಾ ಚಾರ್ಯ, ರಮ್ಯಾ ಶ್ರೀನಾಥ್, ಬೆಳಪು ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.