ಮನೆಗೆ ನುಗ್ಗಿ ಬೆಳ್ಳಿಯ ಸೊತ್ತು ಕಳವು
Update: 2025-06-29 21:20 IST
ಕೋಟ: ಮನೆಗೆ ನುಗ್ಗಿದ ಕಳ್ಳರು ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಜೂ.28ರಂದು ರಾತ್ರಿ ವೇಳೆ ಮಣೂರು ಗ್ರಾಮದ ನಡುಬೆಟ್ಟು ಎಂಬಲ್ಲಿ ನಡೆದಿದೆ.
ಶೋಭಾ ಸುರೇಶ ಎಂಬವರ ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳಪ್ರವೇಶಿಸಿದ ಕಳ್ಳರು, ದೇವರ ಕೋಣೆಯಲ್ಲಿದ್ದ ನಾಲ್ಕು ಬೆಳ್ಳಿಯ ಕಾಲು ದೀಪ, ಬೆಳ್ಳಿಯ ಹರಿವಾಣ ಸೇರಿದಂತೆ ಒಟ್ಟು 150 ಗ್ರಾಂ ತೂಕದ ಬೆಳ್ಳಿಯ ಸಾಮಾಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇದರ ಮೌಲ್ಯ ಸುಮಾರು 7000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.