×
Ad

ಕ್ರೀಡಾಕಿಟ್ ಸೌಲಭ್ಯ: ಪ್ರಸ್ತಾವನೆ ಆಹ್ವಾನ

Update: 2025-06-30 21:08 IST

ಉಡುಪಿ, ಜೂ.30: ಗ್ರಾಮೀಣ ಯುವಜನತೆಯು ಆರೋಗ್ಯಕರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಹಾಯಕ ವಾತಾವರಣವನ್ನು ಸೃಜಿಸಲು ಯುವ ಚೈತನ್ಯ ಯೋಜನೆಯಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಆಯ್ದ ಯುವಸಂಘಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಒದಗಿಸಲು ಜಿಲ್ಲೆಯಲ್ಲಿ ಸಕ್ರಿಯ ವಾಗಿರುವ, ಕರ್ನಾಟಕ ರಾಜ್ಯ ಸಂಘಸಂಸ್ಥೆಗಳ ಕಾಯ್ದೆ 1960ರಡಿ ನೋಂದಣಿಗೊಂಡಿರುವ ಹಾಗೂ ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಮುಖಾಂತರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯಡಿ ಮಾನ್ಯತೆ ಪಡೆದಿರುವ ಯುವಕ/ಯುವತಿಯರ ನಾಲ್ಕು ಯುವ ಸಂಘಗಳಿಂದ (ಗ್ರಾಮೀಣ ಪ್ರದೇಶದ ಶೇ.70, ನಗರ ಪ್ರದೇಶದ ಶೇ.30 ರಷ್ಟು) ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯ ಅರ್ಹ ಯುವಕ ಹಾಗೂ ಯುವತಿ ಸಂಘಗಳು ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲು ಜುಲೈ 15 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ದೂ.ಸಂಖ್ಯೆ: 0820-2521324, 9480886467 ಅನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News