×
Ad

ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2025-06-30 21:11 IST

ಅಜೆಕಾರು, ಜೂ.30: ಕುಡಿತದ ಚಟದಿಂದ ಮಾನಸಿಕ ಒತ್ತಡ ಮತ್ತು ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸಗೊಂಡ ಎಳ್ಳಾರೆ ಗ್ರಾಮದ ನವೀನ (38) ಎಂಬವರು ಜೂ.29ರಂದು ಮಧ್ಯಾಹ್ನ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಸೂಡಾ ಗ್ರಾಮದ ಓರಿಯೇಟರ್ ಕ್ರಷರ್‌ನಲ್ಲಿ ಟ್ರಾಕ್ಟರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಚಾಮರಾಜನಗರ ಜಿಲ್ಲೆ ಮೂಲದ ಕುಮರೇಶ್ (24) ಎಂಬವರು ಕೌಟುಂಬಿಕ ಕಾರಣಕ್ಕಾಗಿ ಜೂ.29ರಂದು ಸಂಜೆ ತಾನು ವಾಸ ಮಾಡಿಕೊಂಡಿದ್ದ ಶೆಡ್ಡಿನ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News