×
Ad

ರಂಗೋಲಿ ಸಾಧಕಿ ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

Update: 2025-06-30 22:09 IST

ಉಡುಪಿ, ಜೂ.30: ಕರಾವಳಿ ಕರ್ನಾಟಕದ ರಂಗೋಲಿ ಕಲೆ ವಿಷಯದಲ್ಲಿ ಸಂಶೋಧನೆ ಮಾಡಿ, ರಂಗೋಲಿ ಕಲೆಯಲ್ಲಿ ದಾಖಲೆ ಮಾಡಿರುವ ಭಾರತಿ ಮರವಂತೆ ಅವರಿಗೆ ’ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

ಭಾರತಿ ಮರವಂತೆ ಅವರು ರಂಗೋಲಿ ಕಲಾ ಪ್ರದರ್ಶನ, ರಂಗೋಲಿ ಕ್ಯಾನ್‌ವಾಸ್ ಪೈಂಟಿಂಗ್, ರಂಗೋಲಿ ತರಬೇತಿ, ನಾಟಕ ಅಕಾಡೆಮಿಯಿಂದ ಕಲಾವಿದರ ಫೆಲೋಶಿಪ್, ರಂಗೋಲಿ ಕೃತಿಗಳು, ಪತ್ರಿಕೆಗಳಲ್ಲಿ ರಚಿಸಿದ ರಂಗೋಲಿ ಚಿತ್ರಗಳ ಪ್ರಕಟಣೆ, ರಂಗೋಲಿ ಪತ್ರಿಕೆ ಸಂಪಾದಕಿಯಾಗಿ ಹಲವು ಸಾಧನೆ ಮಾಡಿದ್ದಾರೆ.ಇವರು ತಮಿಳುನಾಡಿನಲ್ಲಿ ರಚಿಸಿದ್ದ ರಂಗೋಲಿ ಕಲೆ ಮೂಲಕ ವಿಶ್ವದಾಖಲೆಗೂ ಭಾಜನರಾಗಿದ್ದರು.

ರಾಜ್ಯದ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾ ಯಿತು. ಗುರುರಾಜ ಹೊಸಕೋಟೆ, ಡಾ.ಸಿ. ಸೋಮಶೇಖರ, ಡಾ.ಎಸ್ ಬಾಲಾಜಿ, ಡಾ.ಅಲ್ಲಮಪ್ರಭು ಮಹಾಸ್ವಾಮಿ, ಶ್ರೀಪ್ರಭು ಚನ್ನಬಸವ ಸ್ವಾಮೀಜಿ ಮತ್ತಿತರ ಗಣ್ಯರ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News