×
Ad

ಮಾದಕ ದ್ರವ್ಯ ಜಾಗೃತಿ- ಸೈಬರ್ ಅಪರಾಧ ಕುರಿತು ಉಪನ್ಯಾಸ

Update: 2025-07-20 20:08 IST

ಉಡುಪಿ: ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಮನೋ ವಿಜ್ಞಾನ ಮತ್ತು ಮಾನಸರೋಗ ಸ್ನಾತಕೋತ್ತರ ವಿಭಾಗದ ವತಿಯಿಂದ ವಿದ್ಯಾಲಯದ ಮನೋಜ್ಞ ವಿದ್ಯಾರ್ಥಿ ಸಮಾಲೋಚನ ಕೇಂದ್ರದ ಸಹಭಾಗಿತ್ವದೊಂದಿಗೆ ಮಾದಕ ದ್ರವ್ಯ ಜಾಗೃತಿ ಮತ್ತು ಸೈಬರ್ ಅಪರಾಧ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳ ಲಾಗಿತ್ತು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಉಪವಿಭಾಗದ ಡಿವೈಎಸ್ಪಿ ಪ್ರಭು ಡಿ.ಟಿ. ಮತ್ತು ಮಣಿಪಾಲದ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಆಗಮಿಸಿ, ಈ ವಿಷಯಗಳ ಮಹತ್ವ ಸುರಕ್ಷಿತ ನಡವಳಿಕೆಯ ಅಗತ್ಯತೆ ಮತ್ತು ಯುವಜನತೆಯ ನೈತಿಕ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸಿದರು.

ಪ್ರಾಂಶುಪಾಲೆ ಡಾ.ಮಮತಾ ಕೆ.ವಿ., ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ ಎಸ್., ಸ್ನಾತ್ತಕೋತ್ತರ ಮತ್ತು ಪಿಎಚ್‌ಡಿ ವಿಭಾಗದ ಡೀನ್ ಡಾ.ಶ್ರೀಕಾಂತ್ ಪಿ., ಕಾಲೇಜಿನ ಆಡಳಿತ ಮುಖ್ಯಾಧಿಕಾರಿ ಡಾ.ಪ್ರಶಾಂತ್ ಕೆ., ಸ್ನಾತಕ ವಿಭಾಗದ ಡೀನ್ ಡಾ.ಪೃಥ್ವಿರಾಜ್ ಪುರಾಣಿಕ್, ವಿಭಾಗ ಮುಖ್ಯಸ್ಥ ಡಾ. ವಿಜಯೇಂದ್ರ ಜಿ.ಭಟ್ ಮೊದಲಾದವರು ಹಾಜರಿದ್ದರು.

ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಕಿರುವೈದ್ಯರುಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News