ನಿಟ್ಟೆ | ಡಿ.8ರಿಂದ ಪ್ರಾಧ್ಯಾಪಕ ಅಭಿವೃದ್ಧಿ ಕಾರ್ಯಾಗಾರ
ನಿಟ್ಟೆ, ಡಿ.7: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾ ವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗವು ಎಐಸಿಟಿಇ-ಅಟಲ್ ಪ್ರಾಯೋಜಿತ ಆರು ದಿನಗಳ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ (ಎಫ್ಡಿಪಿ) - ಎಪ್ಲಿಕೇಶನ್ ಆಫ್ ಮೆಶಿನ್ ಲರ್ನಿಂಗ್ ಟೆಕ್ನಿಕ್ಸ್ ಇನ್ ಹೆಲ್ತ್ಕೇರ್ ಎಂಬ ವಿಷಯದ ಕುರಿತಂತೆ ಸೋಮವಾರದಿಂದ ಡಿ.13ರವರೆಗೆ ಪ್ರಾಧ್ಯಾಪಕ ಅಭಿವೃದ್ಧಿ ಕಾರ್ಯಾಗಾರ ಆಯೋಜಿಸಿದೆ.
ಆರು ದಿನಗಳ ಈ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಡಿ.8ರ ಬೆಳಗ್ಗೆ 9:30ಕ್ಕೆ ನಿಟ್ಟೆಯಲ್ಲಿ ಜರುಗಲಿದೆ. ಮುಖ್ಯ ಅತಿಥಿಯಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಮುಖ್ಯ ಸಂಶೋಧನಾ ವಿಜ್ಞಾನಿ ಡಾ.ಎಸ್.ಎನ್.ಓಂಕಾರ್ ಭಾಗವಹಿಸುವರು. ನಿಟ್ಟೆ (ಡಿಮ್ಡ್) ವಿವಿಯ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ ಗೌರವ ಅತಿಥಿಯಾಗಿ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ನಿರಂಜನ ಎನ್. ಚಿಪ್ಳೂಣಕರ್ ವಹಿಸಲಿದ್ದಾರೆ.
ಆರೋಗ್ಯ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ತಂತ್ರಗಳ ಬಳಕೆ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ಐಐಎಸ್ಸಿ ಬೆಂಗಳೂರು, ಎನ್ಐಟಿಕೆ ಸುರತ್ಕಲ್, ಎಂಐಟಿ ಮಣಿಪಾಲ, ಎಚ್ಪಿಇ ಬೆಂಗಳೂರು ಹಾಗೂ ನಿಟ್ಟೆ ಸಂಸ್ಥೆಗಳಿಂದ ಶೈಕ್ಷಣಿಕ ಹಾಗೂ ಕೈಗಾರಿಕಾ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.