ನ.1ರಂದು ವಸಂತ ಕಲಾ ಚಿತ್ರಕಲಾ ಪ್ರದರ್ಶನ
Update: 2023-10-31 18:59 IST
ಉಡುಪಿ, ಅ.31: ಉಡುಪಿಯ ಕಲಾವಿದೆ ದಿವಂಗತ ವಸಂತಲಕ್ಷ್ಮೀ ಹೆಬ್ಬಾರ್ ಅವರ ಚಿತ್ರಕಲಾ ನೈಪುಣ್ಯವನ್ನು ಸಾರುವ ‘ವಸಂತ ಕಲಾ’ ಎಂಬ ಚಿತ್ರಕಲಾ ಪ್ರದರ್ಶನವನ್ನು ಉಡುಪಿ ಕುಂಜಿಬೆಟ್ಟಿನ ಅದಿತಿ ಗ್ಯಾಲರಿಯಲ್ಲಿ ನ.1ರಂದು ಬೆಳಗ್ಗೆ 11ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಹಿರಿಯ ಕಲಾವಿದ ಯು.ರಮೇಶ ರಾವ್, ಕಲಾವಿದೆ ಶರ್ಮಿಳಾ ಗುಪ್ತೆ ಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಸುಮಾರು 70 ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ ಎಂದು ಅದಿತಿ ಗ್ಯಾಲರಿಯ ಡಾ.ಕಿರಣ್ ಆಚಾರ್ಯ, ರಂಜನಿ ಮೆಮೋರಿಯಲ್ ಟ್ರಸ್ಟ್‌ನ ಅರವಿಂದ ಹೆಬ್ಬಾರ್, ರಾಜಮೋಹನ ವಾರಂಬಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.