×
Ad

ಉಡುಪಿ| ಮಗುವಿನ ಚಿಕಿತ್ಸೆಗೆ ಹಣ ನೀಡುವುದಾಗಿ ಆನ್‌ಲೈನ್ ವಂಚನೆ: ಪ್ರಕರಣ ದಾಖಲು

Update: 2025-07-30 21:47 IST

ಬ್ರಹ್ಮಾವರ, ಜು.31: ಮಗುವಿನ ಚಿಕಿತ್ಸೆಗೆ ಹಣ ನೀಡುವುದಾಗಿ ನಂಬಿಸಿ ಮಹಿಳೆಗೆ 30,000 ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೇರ್ಕಾಡಿಯ ಮಹಿಳೆಯೊಬ್ಬರ 1 ತಿಂಗಳ ಗಂಡು ಮಗುವಿಗೆ ಹೃದಯ ಸಂಬಂಧಿ ಖಾಯಿಲೆ ಇದ್ದು ಖಾಯಿಲೆ ಚಿಕಿತ್ಸೆಗೆ ಸುಮಾರು 10 ಲಕ್ಷ ಖರ್ಚು ಆಗುವುದರಿಂದ ಹಣದ ಸಂಗ್ರಹದ ಬಗ್ಗೆ ವಾಟ್ಸ್‌ಅಪ್ ಗ್ರೂಪ್‌ನಲ್ಲಿ ಸಹಾಯ ಮಾಡುವಂತೆ ಮಾನವಿ ಮಾಡಿಕೊಂಡಿದ್ದರು.

ಜು.28ರಂದು ಮಹಿಳೆಗೆ ಕರೆ ಮಾಡಿದ ವ್ಯಕ್ತಿ, ಚಿಕಿತ್ಸೆಗೆ ನಾನು 3 ಲಕ್ಷ ಹಣ ಕಳುಹಿಸುತ್ತೇನೆ, ಆದರೆ ಜಿ.ಎಸ್.ಟಿ ಕಟ್ಟಲು 30,000 ರೂ. ಹಣ ನನಗೆ ಕಳುಹಿಸಬೇಕು ಎಂದು ಹೇಳಿದ್ದರು. ಅದನ್ನು ನಂಬಿದ ಮಹಿಳೆ ಆ ವ್ಯಕ್ತಿಯ ಖಾತೆಗೆ 30,000 ರೂ. ಹಣ ಕಳುಹಿಸಿದ್ದರು. ಆ ಹಣ ಪಡೆದ ವ್ಯಕ್ತಿ ಮಹಿಳೆಗೆ ಹಣ ನೀಡದೆ ವಂಚಿಸಿರುವುದಾಗಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News