ನಮ್ ಟೀಮ್ ಮಣಿಪಾಲ ವಾರ್ಷಿಕೋತ್ಸವ: ಸಾಧಕರಿಗೆ ಸನ್ಮಾನ
ಮಣಿಪಾಲ, ಜ.1: ಮಣಿಪಾಲ ನಮ್ ಟೀಮ್‌ನ 23ನೇ ವಾರ್ಷಿಕೋತ್ಸವವನ್ನು ಸರಳಬೆಟ್ಟುವಿನ ಡಾ.ರಾಜಕುರ್ಮಾ ಮಾರ್ಗದಲ್ಲಿ ಡಿ.31ರಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಜಯಶೆಟ್ಟಿ ಬನ್ನಂಜೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆಹಾರ ಅರಸಿ ಬರುವ ಬೀಡಾಡಿ ದನಗಳಿಗೆ ನಿತ್ಯ ಆಹಾರ ನೀಡುತ್ತಿರುವ ತೀರ್ಥಳ್ಳಿ ಪುರಸಭಾ ಮಾಜಿ ಉಪಾಧ್ಯಕ್ಷ ಕೆ.ಆರ್. ಅಶೋಕ್ ಅವರನ್ನು ಸನ್ಮಾನಿಸಲಾಯಿತು. ಹಿರಿಯಡ್ಕ ಸುಧೀರ್ ಶೆಟ್ಟಿ, ಜಯದೀಪ್ ನಾಯಕ್, ಪರ್ಕಳ ನಮ್ ಟೀನ ಕಾರ್ಯಕ್ರಮ ಸಂಘಟಕ ಗಣೇಶ್‌ರಾಜ್ ಸರಳಬೆಟ್ಟು, ಸಿಸ್ಟರ್ ಜ್ಯೋತಿ ಗಣೇಶ ರಾಜ್, ರಾಜೇಶ್ ಪ್ರಭು ಪರ್ಕಳ. ಸುಜಾತ ವಿ.ಪುತ್ರನ್, ಸರಳಬೆಟ್ಟು ರಾಜಣ್ಣ, ರಾಣಿ, ಮೇರಿ ಸುಬ್ರಾಯ ಕಾಮತ್, ಮಂಜುಳಾ ನಾಯ್ಕ್, ದಿವ್ಯ ನಾಯ್ಕ್, ದಿನೇಶ್ ಹಾವಂಜೆ, ಹರೀಶ್ ಪೂಜಾರಿ ಕೀಳಂಜೆ ಮೊದಲಾದವರು ಉಪಸ್ಥಿತರಿದ್ದರು
ಮಕ್ಕಳಿಗೆ ದಾನಿಗಳ ಸಹಕಾರದಿಂದ ನೋಟ್ ಬುಕ್ ಹಾಗೂ ಶಾಲಾ ಪರಿಕರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ವಿವಿಧ ಆಟೋಟ ಸ್ಪರ್ಧೆ ನಂತರ ಹೊಸ ವರ್ಷ ಆಚರಿಸಲಾಯಿತು.