×
Ad

ಸೇನಾಪುರದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಮನವಿ

Update: 2023-10-28 21:08 IST

ಕುಂದಾಪುರ, ಅ.28: ಕುಂದಾಪುರದ ಸೇನಾಪುರ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಸೇನಾಪುರ ಎಕ್ಸ್‌ಪ್ರೆಸ್ ರೈಲು ನಿಲುಗಡೆಯ ಹೋರಾಟ ಸಮಿತಿಯ ವತಿಯಿಂದ ಶನಿವಾರ ಶಿವಮೊಗ್ಗ ಸಂಸದ ಬಿಎಸ್‌ವೈ ರಾಘವೇಂದ್ರ ಅವರಿಗೆ ಅವರ ಶಿವಮೊಗ್ಗದ ನಿವಾಸದಲ್ಲಿ ಮನವಿ ಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸಂಚಾಲಕ ರಾಜೀವ ಪಡುಕೋಣೆ, ಮುಖಂಡರಾದ ಪ್ರಭು ಕೆನಡಿ ಪೆರೆರ ಸೇನಾಪುರ, ರಾಮ ಪೂಜಾರಿ ಮುಲ್ಲಿಮನೆ ಪಡುಕೋಣೆ, ರಾಜೇಶ ಪಡುಕೋಣೆ ಮತ್ತು ನರಸಿಂಹ ದೇವಾಡಿಗ ಆಲೂರು ಉಪಸ್ಥಿತರಿದ್ದರು.

ಮನವಿಗೆ ಪೂರಕವಾಗಿ ಸ್ಪಂದಿಸಿದ ಸಂಸದರು, ಇಲಾಖೆ ಗಮನಕ್ಕೆ ತಂದು ಅತಿ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News