ಅರುಣ್ ಕುಮಾರ್‌ಗೆ ಪಿಎಚ್‌ಡಿ ಪದವಿ
Update: 2024-09-03 17:55 IST
ಉಡುಪಿ, ಸೆ.3: ಮಣಿಪಾಲದ ಎಂಐಟಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅರುಣ್ ಕುಮಾರ್, ಸಂಶೋಧನಾ ಮೇಲ್ವಿಚಾರಕ ಡಾ.ಕಿರಣ್ ಕುಮಾರ್ ಶೆಟ್ಟಿ ಅವರ ಮಾರ್ಗದರ್ಶನ ಮತ್ತು ಡಾ.ಎ.ಕೃಷ್ಣಮೂರ್ತಿ ಅವರ ಸಹಮಾರ್ಗದರ್ಶನದಲ್ಲಿ ‘ಹೆಲಿಕಲ್ ಗ್ರೂವ್ಡ್ ರೀನ್‌ಪೋರ್ಸ್ಡ್ ಕಾಂಕ್ರೀಟ್ ಫೈಲ್ ಇನ್ ಕೊಹೆಶನ್‌ಲೆಸ್’ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಮಣಿಪಾಲದ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಪಿಎಚ್‌ಡಿ ಪದವಿ ನೀಡಿದೆ. ಅರುಣ್ ಕುಮಾರ್ ಮುನಿರಾಜು ವೈ.ಆರ್. ಮತ್ತು ವರಲಕ್ಷ್ಮಿ ದಂಪತಿಯ ಪುತ್ರ.