×
Ad

ಸೆ.22ರಂದು ಉಡುಪಿ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯ

Update: 2023-09-20 20:17 IST

ಉಡುಪಿ, ಸೆ.20: 110/11 ಕೆವಿ ಹಾಲಾಡಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಆವರ್ಸೆ, ಬಿದ್ಕಲ್‌ಕಟ್ಟೆ, ಬೈಲೂರು, ಬೆಳ್ವೆ, ಹೈಕಾಡಿ ಮತ್ತು ಕೆ.ಎನ್.ಎನ್.ಎಲ್ ಹಾಲಾಡಿ ಮಾರ್ಗಗಳಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಂಡಿ ರುವುದರಿಂದ ಕುಳುಂಜೆ, ಶಂಕರನಾರಾಯಣ, ಬಿದ್ಕಲ್‌ಕಟ್ಟೆ, ಹಾಲಾಡಿ, ಮೊಳಹಳ್ಳಿ, ಹಾರ್ದಳ್ಳಿ-ಮಂಡಳ್ಳಿ, ಕಕ್ಕುಂಜೆ, ಯಡಾಡಿ- ಮತ್ಯಾಡಿ, ಹೆಸ್ಕತ್ತೂರು, ಮಚ್ಚಟ್ಟು, ಅಮಾಸೆಬೈಲು, ಹಳ್ಳಾಡಿ-ಹರ್ಕಾಡಿ, ಅಲ್ಬಾಡಿ, ಆರ್ಡಿ, ಶೇಡಿಮನೆ, ಹೈಕಾಡಿ, ಗೋಳಿಯಂಗಡಿ, ಬೆಳ್ವೆ, ಹೆಂಗವಳ್ಳಿ, ಸೂರ್ಗೋಳಿ, ಬೈಲೂರು, ಕಾಜಾಡಿ ಮತ್ತು ಕೊಂಡಳ್ಳಿ ಗ್ರಾಮಗಳ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಸೆ.22ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಅದೇ ರೀತಿ 110/11 ಕೆವಿ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಬ್ರಹ್ಮಾವರ, ಮಾಬುಕಳ ಮತ್ತು ಹೊನ್ನಾಳ ಫೀಡರ್ ಮಾರ್ಗದಲ್ಲಿ ಪರಿವರ್ತಕ ಕೇಂದ್ರಗಳ ಸ್ಟ್ರಕ್ಚರ್ ಬದಲಾವಣೆ, ತುರ್ತು ಕಾಮಗಾರಿ ಮತ್ತು ಎಲ್.ಟಿ ಮಾರ್ಗ ವಿಸ್ತರಣೆ ಕಾಮಗಾರಿ ಹಮ್ಮಿಕೊಂಡಿರು ವುದರಿಂದ ಹಂದಾಡಿ, ಬೇಳೂರುಜೆಡ್ಡು, ಬ್ರಹ್ಮಾವರ, ರಥಬೀದಿ, ಚಾಂತಾರು, ವಾರಂಬಳ್ಳಿ, ಕುಮ್ರಗೋಡು, ಉಪ್ಪಿನಕೋಟೆ, ಬಾಳ್ತಾರು, ಸೂಲ್ಕುದ್ರು, ಆದರ್ಶನಗರ, ಕೀರ್ತಿನಗರ, ಸಾಲಿಕೇರಿ, ಬಿರ್ತಿ, ಹೊನ್ನಾಳ, ಕುಕ್ಕುಡೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆ.22ರಂದು ಬೆಳಗ್ಗೆ 9:30 ರಿಂದ ಸಂಜೆ 5:30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News