×
Ad

ಉಡುಪಿ ಡಿಸಿಆರ್‌ಬಿಯ ವಿಜಯ ಕುಮಾರ್‌ಗೆ ರಾಷ್ಟ್ರಪತಿ ಪದಕ

Update: 2024-08-14 18:32 IST

ಉಡುಪಿ, ಆ.14: ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕ್ರೈಮ್ ರೆಕಾರ್ಡ್ ಬ್ಯುರೊ (ಡಿಸಿಆರ್‌ಬಿ) ಇದರ ಹೆಡ್ ಕಾನ್ಸ್‌ಟೇಬಲ್ ವಿಜಯ ಕುಮಾರ್ ಅವರ ಅತ್ಯುನ್ನತ ಸೇವೆಗಾಗಿ ರಾಷ್ಟ್ರಪತಿ ಯವರ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

1993ರಲ್ಲಿ ಪೊಲೀಸ್ ಇಲಾಖೆಗೆ ಸೆರ್ಪಡೆಗೊಂಡ ಇವರು, ಪಣಂಬೂರು, ಪುತ್ತೂರು, ಕುಂದಾಪುರ, ಉಡುಪಿ ನಗರ, ಉಡುಪಿ ಸಂಚಾರ ಠಾಣೆ ಹಾಗೂ ಹಿರಿಯಡ್ಕ ಪೊಲೀಸ್ ಠಾಣೆಗಳಲ್ಲಿ ಒಟ್ಟು 31ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ.

ಇವರಿಗೆ 2022ನೇ ಸಾಲಿನ ಕರ್ನಾಟಕ ಮುಖ್ಯಮಂತ್ರಿ ಚಿನ್ನದ ಪದಕ ಕೂಡ ದೊರೆತಿದೆ. ಮೂಲತಃ ಬೆಳ್ತಂಗಡಿಯ ಕೆಲ್ಲಗುತ್ತು ನಿವಾಸಿಯಾಗಿರುವ ಇವರು, ದಿ.ಗೋಪಾಲಕೃಷ್ಣ ಹಾಗೂ ಶಾರದಾ ದಂಪತಿ ಪುತ್ರ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News