ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು
Update: 2025-07-23 20:48 IST
ಕುಂದಾಪುರ: ಕುಂದಾಪುರದ ಪಿ.ರವೀಂದ್ರ ಎಂಬವರ ಮನೆಗೆ ಜು.18ರಿಂದ ಜು.20ರ ಮಧ್ಯಾವಧಿಯಲ್ಲಿ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಕೋಣೆಯ ಕಾಪಾಟಿನಲ್ಲಿದ್ದ 4 ಬೆಳ್ಳಿಯ ಹರಿವಾಣ, ಬೆಳ್ಳಿಯ ತಂಬಿಗೆ, ಬೆಳ್ಳಿಯ ಲಕ್ಷ್ಮಿ ದೀಪ, 4 ಬೆಳ್ಳಿಯ ಲೋಟ, ಬೆಳ್ಳಿಯ ಕುಂಕುಮದ ತಟ್ಟೆ, ಬೆಳ್ಳಿಯಕಾಲು ದೀಪ, ಬೆಳ್ಳಿಯ ಆರತಿ, ಒಂದು ಜೊತೆ ಚಿನ್ನದ 7 ವಜ್ರದ ಹರಳಿನ ಬೆಂಡೋಲೆ, ಕಿವಿ ಚೈನ್, 47500ರೂ. ನಗದನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 4,57,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.