×
Ad

ಡಾ.ಉದಯ್ ಕುಮಾರ್ ತಲ್ಲೂರ್‌ಗೆ ಸಾರ್ವಜನಿಕ ಸನ್ಮಾನ

Update: 2024-09-04 17:40 IST

ಕುಂದಾಪುರ : ತಲ್ಲೂರು ಕೋಟೆಬಾಗಿಲಿನ ಸಾರ್ವಜನಿಕರ ವತಿಯಿಂದ ಇತ್ತೀಚೆಗೆ ಅಮೇರಿಕಾ ಏಷ್ಯಾ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಂಶೋಧನಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಡಾ.ಉದಯ್ ಕುಮಾರ್ ತಲ್ಲೂರು ಅವರನ್ನು ತಲ್ಲೂರು ಶೇಷಕೃಷ್ಣ ಕನ್ವೆನ್ಶನ್ ಹಾಲ್‌ನಲ್ಲಿ ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆಯ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಲ್ಲೂರು ಗ್ರಾಪಂ ಸದಸ್ಯರುಗಳಾದ ರಾಧಾಕೃಷ್ಣ ಶೇರುಗಾರ್ ಉಪ್ಪಿನಕುದ್ರು, ಸಂಜೀವ ದೇವಾಡಿಗ, ಅಕ್ಷಯ್ ಕೋಟೆಬಾಗಿಲು, ಕೃಷ್ಣ ಪೂಜಾರಿ ಹಾಗೂ ದಲಿತ ಹೋರಾಟಗಾರ ಯು.ನಾರಾಯಣ್ ಉಪ್ಪಿನಕುದ್ರು, ದಸಂಸ ಬೈಂದೂರು ಸಂಚಾಲಕ ಸಂದೇಶ್ ನಾಡಾ, ಮಾಜಿ ಗ್ರಾಪಂ ಸದಸ್ಯ ವೆಂಕಟ ಉಪ್ಪಿನಕುದ್ರು, ಹಟ್ಟಿಯಂಗಡಿ ಗ್ರಾಪಂ ಮಾಜಿ ಸದಸ್ಯ ಸಂತೋಷ್ ಶೆಟ್ಟಿ ಸಬ್ಲಾಡಿ, ಉಮೇಶ್ ಎಸ್.ಕೆ.ಕೋಟೆಬಾಗಿಲು, ಮಂಜುನಾಥ್ ಕೋಟೆ ಬಾಗಿಲು, ದಸಂಸ ತಾಲೂಕು ಸಂಚಾಲಕ ವಿಜಯ್ ಕೆ.ಎಸ್., ಯೋಗೀಶ್ ಕೋಟೆಬಾಗಿಲು, ರಮೇಶ್ ಕೋಟೆಬಾಗಿಲು ಉಪಸ್ಥಿತರಿದ್ದರು.

ದಸಂಸ ತಾಲೂಕು ಸಂಚಾಲಕ ಮಂಜುನಾಥ್ ಗುಡ್ಡೆಯಂಗಡಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಅರುಣ್ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News